ಕನ್ನಡ ಬೈಬಲ್ (KNCL) 2016
|
| 1 |
| ಯಕೋಬನ ಹನ್ನೆರಡು ಜನ ಮಕ್ಕಳು ಇವರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬೂಲೂನ್, |
| 2 |
| ದಾನ್, ಜೋಸೆಫ್, ಬಿನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್. |
| 3 |
| ಯೆಹೂದನ ಹೆಂಡತಿ ಶೂನನ ಮಗಳಾದ ಕಾನಾನಳು. ಅವಳಿಂದ ಏರ್, ಓನಾನ್, ಶೇಲಹ ಎಂಬ ಮೂರು ಮಕ್ಕಳು ಜನಿಸಿದರು. ಅವನ ಹಿರಿಯ ಮಗ ಏರನು ಬಹಳ ದುಷ್ಟ. ಆದುದರಿಂದ ಸರ್ವೇಶ್ವರ ಅವನನ್ನು ಕೊಂದುಹಾಕಿದರು. |
| 4 |
| ಯೆಹೂದನಿಗೆ ಅವನ ಸೊಸೆ ತಾಮಾರಳಿಂದ ಪೆರೆಜ್ ಹಾಗೂ ಜೆರಹ ಎಂಬ ಮಕ್ಕಳು ಜನಿಸಿದರು. ಯೆಹೂದನ ಮಕ್ಕಳು ಒಟ್ಟು ಐದು ಮಂದಿ. |
| 5 |
| ಪೆರೆಚನಿಗೆ ಹೆಚ್ರೋನ್, ಹಾಮುಲ್ ಎಂಬಿಬ್ಬರು ಮಕ್ಕಳು. |
| 6 |
| ಅವನ ಸಹೋದರ ಜೆರಹನಿಗೆ ಐದು ಜನ ಮಕ್ಕಳು: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್, ಮತ್ತು ದಾರ. |
| 7 |
| ಜೆರಹನ ಸಂತತಿಯಲ್ಲಿ ಕರ್ಮಿಯ ಮಗ ಆಕಾರನು ಸರ್ವೇಶ್ವರನಿಗೆ ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡದ್ದರಿಂದ ಇಸ್ರಯೇಲರಿಗೆ ಆಪತ್ತನ್ನು ತಂದಿದ್ದನು. |
| 8 |
| ಏತಾನನಿಗೆ ಅಜರ್ಯನೆಂಬ ಒಬ್ಬ ಮಗನಿದ್ದನು. |
| 9 |
| ಹೆಚ್ರೋನನಿಗೆ ಮೂರು ಜನ ಮಕ್ಕಳು ಇದ್ದರು. ಅವರು - ಯೆರಹ್ಮೇಲ್, ರಾಮ್ ಮತ್ತು ಕೆಲೂಬಾಯ್ ಎಂಬವರು. |
| 10 |
| ರಾಮನಿಂದ ಜೆಸ್ಸೆವರೆಗಿನ ವಂಶಜರು: ಅಮ್ಮೀನಾದಾಬ್, ಯೆಹೂದ ಗೋತ್ರದ ಪ್ರಮುಖ ವ್ಯಕ್ತಿಯಾದ ನಹಶೋನ, |
| 11 |
| ಸಲ್ಮನ, ಬೋವಜ, |
| 12 |
| ಓಬೇದ ಹಾಗೂ ಜೆಸ್ಸೆ. |
| 13 |
| ಜೆಸ್ಸೆಯ ಏಳು ಜನ ಮಕ್ಕಳು: ಎಲೀಯಾಬ್, ಅಬೀನಾದಾಬ್, ಶಿಮ್ಮ, |
| 14 |
| ನೆತನೇಲ್, ರದ್ದೈ, |
| 15 |
| ಓಚೆಮ್ ಮತ್ತು ದಾವೀದ್. |
| 16 |
| ಅವನ ಇಬ್ಬರು ಹೆಣ್ಣು ಮಕ್ಕಳು: ಚೆರೂಯ ಹಾಗೂ ಅಬೀಗೈಲ ಎಂಬವರು. ಜೆಸ್ಸೆಯ ಮಗಳು ಚೆರೂಯಳಿಗೆ ಅಬೈ, ಯೋವಾಬ್, ಅಸಾಹೇಲ್ ಎಂಬ ಮೂರು ಜನ ಮಕ್ಕಳಿದ್ದರು. |
| 17 |
| ಅವನ ಇನ್ನೊಬ್ಬ ಮಗಳು ಅಬೀಗೈಲಳು ಇಷ್ಮಾಯೇಲನ ವಂಶಜ ಯೆತೆರ್ ಎಂಬವನನ್ನು ವಿವಾಹವಾಗಿ ಅಮಾಸ ಎಂಬ ಮಗನನ್ನು ಪಡೆದಳು. |
| 18 |
| ಹೆಚ್ರೋನನ ಮಗ ಕಾಲೇಬ, ಅಜೂಬಳನ್ನು ಮದುವೆಯಾಗಿ ಯೆರ್ಯೋತ್ ಎಂಬ ಮಗಳನ್ನು ಪಡೆದನು. ಆಕೆಯ ಮೂರು ಜನ ಗಂಡುಮಕ್ಕಳು: ಯೇಷೆರ್, ಶೊಬಾಬ್, ಅರ್ದೋನ್ ಎಂಬವರು. |
| 19 |
| ಅಜೂಬಳ ಮರಣದ ನಂತರ ಕಾಲೇಬನು ಎಫ್ರಾತಳನ್ನು ಮದುವೆ ಆಗಿ ಹೂರ್ ಎಂಬ ಮಗನನ್ನು ಪಡೆದನು. |
| 20 |
| ಹೂರನಿಗೆ ಊರಿಯ ಎಂಬ ಮಗ ಮತ್ತು ಬೆಚಲೇಲ ಎಂಬ ಮೊಮ್ಮಗ ಇದ್ದರು. |
| 21 |
| ಹೆಚ್ರೋನ ಅರುವತ್ತು ವರ್ಷದವನಾದಾಗ ಗಿಲ್ಯಾದನ ಸೋದರಿಯಾದ ಮಾಕೀರನ ಮಗಳನ್ನು ಮದುವೆಯಾದನು. ಅವರಿಗೆ ಸೆಗೂಬ ಎಂಬ ಮಗ ಜನಿಸಿದ. |
| 22 |
| ಸೆಗೂಬನಿಗೆ ಯಾಯೀರ ಎಂಬ ಮಗ ಜನಿಸಿದ. ಯಾಯೀರ ಗಿಲ್ಯಾದನ ಇಪ್ಪತ್ಮೂರು ಪಟ್ಟಣಗಳ ಮೇಲೆ ಆಡಳಿತ ಮಾಡಿದನು. |
| 23 |
| ಆದರೆ ಗೆಷೂರ್ಯರ ಮತ್ತು ಅರಾಮ್ಯರ ರಾಜ್ಯಗಳವರು ಯಾಯೀರನ ಹಾಗೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನೂ ಅವುಗಳ ಸಮೀಪದ ಪಟ್ಟಣಗಳನ್ನೂ ಸೇರಿ ಒಟ್ಟು ಅರುವತ್ತು ಪಟ್ಟಣಗಳನ್ನು ಗೆದ್ದುಕೊಂಡರು. ಅಲ್ಲಿ ವಾಸಿಸಿದ್ದ ಎಲ್ಲಾ ಜನರೂ ಗಿಲ್ಯಾದನ ತಂದೆ ಮಾಕೀರನ ವಂಶಜರೇ ಆಗಿದ್ದರು. |
| 24 |
| ಹೆಚ್ರೋನನು ಮರಣ ಹೊಂದಿದ ನಂತರ ಅವನ ಮಗ ಕಾಲೇಬ್ ತನ್ನ ತಂದೆಯ ವಿಧವೆ ಎಫ್ರಾತಳನ್ನು ಮದುವೆಯಾದನು. ಅವರಿಗೆ ಅಷ್ಹೂರ ಎಂಬ ಮಗ ಜನಿಸಿದ. ತೆಕೋವ ಪಟ್ಟಣವನ್ನು ಕಟ್ಟಿದವನು ಇವನೇ. |
| 25 |
| ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನಿಗೆ ಐದು ಜನ ಮಕ್ಕಳು ಇದ್ದರು. ಅವರು - ಹಿರಿಯವನಾದ ರಾಮ್ ಮತ್ತು ಬೂನ, ಓರೆನ್, ಓಚೆಮ್, ಹಾಗೂ ಅಹೀಯ ಎಂಬವರು. |
| 26 |
| ರಾಮನಿಗೆ ಮಾಚ್, ಯಾಮೀನ್, ಏಕೆರ್ ಎಂಬ ಮೂರು ಮಕ್ಕಳಿದ್ದರು. ಯೆರೆಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಅವಳಿಂದ ಓನಾಮ ಎಂಬ ಮಗ ಜನಿಸಿದ. |
| 27 |
| 28 |
| ಓನಾಮನಿಗೆ ಶಮ್ಮೈ, ಮತ್ತು ಯಾದ ಎಂಬ ಇಬ್ಬರು ಮಕ್ಕಳಿದ್ದರು. ಶಮ್ಮೈ ಮಕ್ಕಳು: ನಾದಾಬ್ ಹಾಗೂ ಅಬೀಷೂರ್. |
| 29 |
| ಅಬೀಷೂರ ಅಬೀಹೈಲ್ ಎಂಬವಳೊಂದಿಗೆ ವಿವಾಹವಾಗಿ ಅಹ್ಬಾನ್, ಮೋಲೀದ್ ಎಂಬಿಬ್ಬರು ಮಕ್ಕಳನ್ನು ಪಡೆದನು. |
| 30 |
| ಅಬೀಷೂರನ ಸಹೋದರ ನಾದಾಬನಿಗೆ ಸೆಲೆದ್, ಅಪ್ಪಯಿಮ್ ಎಂಬಿಬ್ಬರು ಮಕ್ಕಳಿದ್ದರು. ಆದರೆ ಸೆಲೆದನು ಮಕ್ಕಳಿಲ್ಲದೇ ಮರಣ ಹೊಂದಿದನು. |
| 31 |
| ಅಪ್ಪಯಿಮ್ ಇಷ್ಷೀಯ ತಂದೆ. ಇಷ್ಷೀ ಶೇಷಾನ್ ನ ತಂದೆ, ಶೇಷಾನನು ಅಹ್ಲ್ಯೋ ತಂದೆ. |
| 32 |
| ಶಮ್ಮೆಯ ತಮ್ಮನಾದ ಯಾದಾನಿಗೆ ಯೆತೆರ್ ಮತ್ತು ಯೋನಾತಾನ್ ಎಂಬ ಮಕ್ಕಳು ಇದ್ದರು. ಯೆತೆರ್ ಮಕ್ಕಳಿಲ್ಲದೇ ಮಡಿದನು. |
| 33 |
| ಯೋನಾತಾನನಿಗೆ ಪೆಲಿತ್, ಜಾಜ ಎಂಬ ಮಕ್ಕಳಿದ್ದರು. ಇವರೆಲ್ಲರೂ ಯೆರಹ್ಮೇಲನ ವಂಶಜರು. |
| 34 |
| ಶೇಷಾನನಿಗೆ ಗಂಡುಮಕ್ಕಳಿರಲಿಲ್ಲ; ಹೆಣ್ಣು ಮಕ್ಕಳೇ ಇದ್ದರು. ಅವನಿಗೆ ಯರ್ಹ ಎಂಬ ಸೇವಕನಿದ್ದನು. |
| 35 |
| ಅವನಿಗೆ ತನ್ನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಟ್ಟನು. ಅವರಿಗೆ ಜನಿಸಿದ ಮಗನ ಹೆಸರು ಅತ್ತೈ ಎಂದು. |
| 36 |
| ಅತ್ತೈನಿಂದ ಎಲೀಮಾನವರೆಗಿನ ವಂಶಜರ ಹೆಸರುಗಳು: ಅತ್ತೈ, ನಾತಾನ್, ಜಾಬಾದ, |
| 37 |
| ಎಫ್ಲಾಲ, ಓಬೇದ್, |
| 38 |
| ಯೇಹೂವು, ಅಜರ್ಯ, |
| 39 |
| ಹೆಲೆಚ, ಎಲ್ಲಾಸ, |
| 40 |
| ಸಿಸ್ಮೈ, ಶಲ್ಲೂಮ, |
| 41 |
| ಯೆಕಮ್ಯಾಹ ಮತ್ತು ಎಲೀಷಾಮ. |
| 42 |
| ಕಾಲೇಬನ ಚೊಚ್ಚಲು ಮಗನಿಗೆ ಅಂದರೆ ಯೆರಹ್ಮೇಲನ ಸಹೋದರನಿಗೆ ಮೇಷ ಎಂದು ಹೆಸರಿಡಲಾಗಿತ್ತು. ಮೇಷನು ಜೀಫ್ಯನ ತಂದೆ, ಇವನು ಮಾರೇಷನ ತಂದೆ, ಇವನು ಹೆಬ್ರೋನನ ತಂದೆ, |
| 43 |
| ಹೆಬ್ರೋನನಿಗೆ ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆವು ಎಂಬ ನಾಲ್ವರು ಮಕ್ಕಳು ಇದ್ದರು. |
| 44 |
| ಶೆಮ ರಹಮನ ತಂದೆ, ಯೊರ್ಕೆಯಾಮ್ಯನ ಅಜ್ಜ. ಶೆಮನ ಸಹೋದರ ರೆಕೆಮ ಶಮ್ಮೈಯನ ತಂದೆ, |
| 45 |
| ಇವನು ಮಾವೋನ್ಯನ ತಂದೆ, ಇವನು ಬೇತ್ಸೂರನ ತಂದೆ. |
| 46 |
| ಕಾಲೇಬನಿಗೆ ಏಫಾ ಎಂಬ ಉಪಪತ್ನಿ ಇದ್ದಳು. ಅವಳಿಂದ ಅವನಿಗೆ ಹಾರಾನ್, ಮೋಚ, ಗಾಜೇಜ್ ಹುಟ್ಟಿದರು. ಹಾರಾನನಿಗೆ ಗಾಜೇಜ ಎಂಬ ಹೆಸರಿನ ಮಗನಿದ್ದನು. |
| 47 |
| ಯಾದೈ ಎಂಬವನಿಗೆ ಆರು ಜನ ಮಕ್ಕಳು: ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಪ, ಶಾಫ್ ಎಂಬವರು. |
| 48 |
| ಕಾಲೇಬನ ಇನ್ನೊಬ್ಬ ಉಪಪತ್ನಿ - ಮಾಕಾ. ಅವಳಿಂದ ಶೆಬಿರ್, ತಿರ್ಹನ ಎಂಬಿಬ್ಬರು ಮಕ್ಕಳು ಜನಿಸಿದರು. |
| 49 |
| ಅನಂತರ ಅವಳಿಗೆ ಮತ್ತೆ ಇಬ್ಬರು ಮಕ್ಕಳು ಜನಿಸಿದರು: ಮದ್ಮನ್ನ ಪಟ್ಟಣವನ್ನು ಕಟ್ಟಿಸಿದ ಶಾಫ್ ಒಬ್ಬನು. ಮಕ್ಬೇನ ಮತ್ತು ಗಿಬ್ಯ ಪಟ್ಟಣಗಳನ್ನು ಕಟ್ಟಿಸಿದ ಶೆವ ಇನ್ನೊಬ್ಬನು. ಇವರಲ್ಲದೆ ಕಾಲೇಬನಿಗೆ ಅಕ್ಸಾಹ ಎಂಬ ಹೆಣ್ಣು ಮಗಳು ಇದ್ದಳು. |
| 50 |
| ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ ಎಂದು. ಹೂರನ ಮಗ ಶೋಬಾಲ್ - ಕಿರ್ಯತ್ಯಾರೀಮ್ ಪಟ್ಟಣವನ್ನೂ |
| 51 |
| ಅವನ ಇನ್ನೊಬ್ಬ ಮಗ ಸಲ್ಮ ಬೆತ್ಲೆಹೇಮನ್ನೂ ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು. |
| 52 |
| ಕಿರ್ಯತ್ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ, |
| 53 |
| ಹಾಗೂ ಕಿರ್ಯತ್ಯಾರೀಮ್ನಲ್ಲಿ ವಾಸಿಸುವ ಯೆತೆರಿನವರ, ಪೂತ್ಯರ, ಶುಮಾತ್ಯರ ಹಾಗೂ ಮಿಷ್ರಾಗ್ಯರ ಪೂರ್ವಜನಾಗಿದ್ದನು. ಚೊರ್ರಾತ್ಯರು ಹಾಗೂ ಎಷ್ಟಾವೋಲ್ಯರು ಈ ಗೋತ್ರಗಳಿಗೆ ಸೇರಿದವರು. |
| 54 |
| ನೆಟೋಫಾ, ಅಟರೋತ್, ಬೇತ್ಯೋವಾಬ್ ಹಾಗೂ ಮಾನಹತಿಯರ ಎರಡು ಗೋತ್ರಗಳಲ್ಲಿ ಒಂದಾದ ಜೊರ್ಗದ ನಿವಾಸಿಗಳಿಗೆ ಬೆತ್ಲೆಹೇಮ್ ಪಟ್ಟಣದ ಸ್ಥಾಪಕ ಸಲ್ಮನು ಮೂಲಪುರುಷ ಆಗಿದ್ದನು. |
| 55 |
| ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ನಕಲು ಮಾಡುವುದರಲ್ಲಿ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು, ಸುಕಾತ್ಯರು ಯಾಬೇಚಿನಲ್ಲಿ ವಾಸಿಸಿದ್ದರು. ರೇಕಾಬ್ಬರೊಂದಿಗೆ ಅಂತರ್ ವಿವಾಹ ಮಾಡಿಕೊಂಡ ಕೇನ್ಯರು ಇವರೇ. |
|
| ಟಿಪ್ಪಣಿಗಳನ್ನು ಉಳಿಸಿ |
https://beblia.bible:81/BibleAudio/kannadakncl/1chronicles/002.mp3
29
2