× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ Bosnian Kabardian ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ Tibetian ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು Aceh Balinese Bugis Pampanga Sasak Shan Waray ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ Adilabad Gondi Ahirani ಬಲೂಚಿ Bundeli Chhattisgarhi Garhwali Kangri Kumaoni Mewari Munda Sadri Seraiki Shekhawati Sylheti Bagri Bhilali Bodo Braj Tulu ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ Mazanderani ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ Bemba Fon Hadiyya Ibibio Kimbundu Kimiiru Lango Liberian Kreyol Lomwe Mende Morisyen Ndau Nyankole Sena Sidamo Soga Songe Sukuma Tarifit Teso Tiv Zande Dagbani Edo Kituba ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ [2016] ಕನ್ನಡ ಸಮಕಾಲಿಕ ೨೦೨೨ [2022]ಇಂಡಿಯನ್ ರಿವೈಜ್ಡ್ ೨೦೧೯ [2019]ಕನ್ನಡ ಸತ್ಯವೇದವು ೨೦೧೬ [2016]KNCL ೨೦೧೬ [2016]BSI ೨೦೧೬ [2016]ಪರಿಶುದ್ದ ಬೈಬಲ್ ೧೯೯೭ [1997]1 1 1 ಅರಸುಗಳು ೧ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೫ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮1 1 1 ಕನ್ನಡ ಬೈಬಲ್ (KNCL) 2016 ಅರಸುಗಳು ೧ ೫ ಟಿಪ್ಪಣಿಗಳನ್ನು ಉಳಿಸಿ ೧ [1]ದಾವೀದನಿಗೆ ಜೀವಮಾನದಲ್ಲೆಲ್ಲಾ ಆಪ್ತಮಿತ್ರನಾಗಿದ್ದ ಟೈರಿನ ಅರಸನಾದ ಹೀರಾಮನು, ಸೊಲೊಮೋನನು ತಂದೆಗೆ ಬದಲಾಗಿ ಪಟ್ಟಾಭಿಷೇಕ ಪಡೆದಿದ್ದಾನೆಂದು ಕೇಳಿ, ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು.೨ [2]ಸೊಲೊಮೋನನು ದೂತರ ಮುಖಾಂತರ ಹೀರಾಮನಿಗೆ,೩ [3]“ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ನಮ್ಮ ತಂದೆ ದಾವೀದನಿಗೆ ಎಲ್ಲಾ ಶತ್ರುಗಳು ವಶವಾದರು. ಅಲ್ಲಿಯವರೆಗೆ ಅವರು ಸುತ್ತಲೂ ಯುದ್ಧಗಳನ್ನು ನಡೆಸಬೇಕಾಗಿತ್ತು. ಆದ್ದರಿಂದ ತಮ್ಮ ದೇವರಾದ ಸರ್ವೇಶ್ವರನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದರು. ಇದು ನಿಮಗೆ ತಿಳಿದ ವಿಷಯ.೪ [4]ನನಗಾದರೋ ನನ್ನ ದೇವರಾದ ಸರ್ವೇಶ್ವರ ಎಲ್ಲ ಕಡೆಗಳಲ್ಲೂ ಸಮಾಧಾನವನ್ನು ಅನುಗ್ರಹಿಸಿದ್ದಾರೆ; ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ; ಆಪತ್ತು ವಿಪತ್ತು ದೂರವಾಗಿವೆ.೫ [5]ಸರ್ವೇಶ್ವರ ನನ್ನ ತಂದೆ ದಾವೀದನಿಗೆ, ‘ನಾನು ನಿನ್ನ ಸ್ಥಾನದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗ, ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ,’ ಎಂದು ಹೇಳಿದ್ದರು. ಆದುದರಿಂದ ನಾನು ನನ್ನ ದೇವರಾದ ಸರ್ವೇಶ್ವರನಿಗೆ ಒಂದು ಆಲಯವನ್ನು ಕಟ್ಟಬೇಕೆಂದಿರುತ್ತೇನೆ.೬ [6]ನೀನು ನನಗೋಸ್ಕರ ಲೆಬನೋನಿನ ದೇವದಾರು ವೃಕ್ಷಗಳನ್ನು ಕೊಯ್ಯಬೇಕೆಂದು ನಿನ್ನ ಆಳುಗಳಿಗೆ ಆಜ್ಞಾಪಿಸು; ಅವರ ಜೊತೆಯಲ್ಲಿ ನನ್ನ ಆಳುಗಳನ್ನೂ ಕಳುಹಿಸುವೆನು. ಮತ್ತು ನಿನ್ನ ಆಳುಗಳಿಗೆ ನೀನು ಹೇಳುವಷ್ಟು ಸಂಬಳವನ್ನು ಕೊಡುತ್ತೇನೆ. ಸಿದೋನ್ಯರಂತೆ ಮರಕೊಯ್ಯುವುದರಲ್ಲಿ ಜಾಣರು ನಮ್ಮಲ್ಲಿರುವುದಿಲ್ಲವೆಂದು ನಿನಗೆ ಗೊತ್ತಿದೆಯಲ್ಲವೆ?” ಎಂದು ಹೇಳಿಸಿದನು.೭ [7]ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷಪಟ್ಟನು. “ಈ ಮಹಾಜನಾಂಗವನ್ನು ಆಳುವುದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತ ಮಗನನ್ನು ಅನುಗ್ರಹಿಸಿದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!” ಎಂದು ನುಡಿದನು.೮ [8]ಇದೂ ಅಲ್ಲದೆ, ಅವನು ಸೊಲೊಮೋನನಿಗೆ, “ನೀನು ಹೇಳಿ ಕಳುಹಿಸಿದ್ದನ್ನು, ಕೇಳಿದೆನು; ದೇವದಾರು ವೃಕ್ಷಗಳನ್ನೂ ತುರಾಯಿಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು.೯ [9]ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ ಸಮುದ್ರಮಾರ್ಗವಾಗಿ ನೀನು ನೇಮಿಸುವ ಸ್ಥಳಕ್ಕೆ ಕಳುಹಿಸಿ ಅಲ್ಲೆ ಬಿಚ್ಚಿಸುವೆನು; ನೀನು ಅವುಗಳನ್ನು ತೆಗೆದುಕೊಂಡು, ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರಪದಾರ್ಥಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆ,” ಎಂದು ಹೇಳಿಕಳುಹಿಸಿದನು.೧೦ [10]ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರಿನ ಮರಗಳನ್ನೂ ತುರಾಯಿಮರಗಳನ್ನೂ ಕೊಡುತ್ತಿದ್ದನು.೧೧ [11]ಸೊಲೊಮೋನನಾದರೋ ಪ್ರತಿವರ್ಷ ಅವನ ಮನೆಯವರ ಆಹಾರಕ್ಕಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿಯನ್ನೂ ನಾಲ್ಕು ಸಾವಿರ ಲೀಟರ್ ಅಪ್ಪಟ ಎಣ್ಣೆಯನ್ನೂ ಕೊಡುತ್ತಿದ್ದನು.೧೨ [12]ಸರ್ವೇಶ್ವರ ವಾಗ್ದಾನಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದ್ದರು. ಸೊಲೊಮೋನನಿಗೂ ಹೀರಾಮನಿಗೂ ಸಮಾಧಾನವಿತ್ತು; ಅವರು ಒಂದು ಒಪ್ಪಂದ ಮಾಡಿಕೊಂಡಿದ್ದರು.೧೩ [13]ಅರಸ ಸೊಲೊಮೋನನು, ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿಯನ್ನು ಬಿಟ್ಟಿಕೆಲಸಕ್ಕೆಂದು ಹಿಡಿದು,೧೪ [14]ಅವರಲ್ಲಿ ತಿಂಗಳೊಂದಕ್ಕೆ ಹತ್ತುಸಾವಿರ ಮಂದಿಯಂತೆ ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ, ಎರಡು ತಿಂಗಳು ಮನೆಯಲ್ಲಿರುತ್ತಿದ್ದರು. ಅದೋನೀರಾಮನು ಇವರ ಮುಖ್ಯಸ್ಥನಾಗಿದ್ದನು.೧೫ [15]ಇದಲ್ಲದೆ, ಸೊಲೊಮೋನನಿಗೆ ಎಪ್ಪತ್ತು ಸಾವಿರಮಂದಿ ಹೊರೆಹೊರುವವರೂ ಎಂಬತ್ತು ಸಾವಿರಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರೂ ಇದ್ದರು.೧೬ [16]ಈ ಕೆಲಸದವರ ಮೇಲ್ವಿಚಾರಣೆಗಾಗಿ ಅವನು ಮೂರು ಸಾವಿರದ ಮುನ್ನೂರುಮಂದಿ ಮೇಸ್ತ್ರಿಗಳನ್ನು ನೇಮಿಸಿದ್ದನು.೧೭ [17]ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ತಿವಾರಕ್ಕಾಗಿ ಆಳುಗಳು, ಸೊಲೊಮೋನನ ಅಪ್ಪಣೆಯಂತೆ, ಶ್ರೇಷ್ಠವಾದ ದೊಡ್ಡ ಕಲ್ಲುಗಳನ್ನು ಕೊರೆಯುತ್ತಿದ್ದರು.೧೮ [18]ಸೊಲೊಮೋನನ ಮತ್ತು ಹೀರಾಮನ ಶಿಲ್ಪಿಗಳೂ ಗೆಬಾಲ್ಯರೂ ಅವುಗಳನ್ನು ಕೆತ್ತುತ್ತಿದ್ದರು. ದೇವಾಲಯ ಕಟ್ಟುವುದಕ್ಕೆ ಬೇಕಾದ ಕಲ್ಲು, ಮರಗಳನ್ನು ಸಿದ್ಧಪಡಿಸಿದವರು ಇವರೇ.Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide ಕನ್ನಡ ಬೈಬಲ್ (KNCL) 2016 ಅರಸುಗಳು ೧ ೫ 00:00:00 00:00:00 0.5x 2.0x https://beblia.bible:81/BibleAudio/kannadakncl/1kings/005.mp3 22 5