× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ KSB ೨೦೨೨IRV ೨೦೧೯BSIJV ೨೦೧೬KNCL ೨೦೧೬BSI ೨೦೧೬ERV ೨೦೦೭1 1 1 ಎಜ್ರನು ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೪ ೧೨೩೪೫೬೭೮೯೧೦1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪1 1 1 ಕನ್ನಡ ಬೈಬಲ್ (KNCL) 2016 ಎಜ್ರನು ೪ ಟಿಪ್ಪಣಿಗಳನ್ನು ಉಳಿಸಿ ೧ [1]ಸೆರೆಯಿಂದ ಮರಳಿ ಬಂದವರು ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಮಂದಿರವನ್ನು ಕಟ್ಟುತ್ತಿದ್ದಾರೆಂಬ ಸಮಾಚಾರ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ವಿರೋಧಿಗಳಿಗೆ ಮುಟ್ಟಿತು.೨ [2]ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು, “ನಿಮ್ಮೊಡನೆ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ; ಏಕೆಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರು; ನಮ್ಮನ್ನು ಇಲ್ಲಿ ತಂದಿರಿಸಿದ ಅಸ್ಸೀರಿಯದ ಅರಸ ಏಸರ್ಹದ್ದೋನನ ಕಾಲದಿಂದ ನಾವು ಆ ದೇವರಿಗೇ ಬಲಿಯರ್ಪಣೆ ಮಾಡುತ್ತಾ ಬಂದಿದ್ದೇವೆ,” ಎಂದು ಹೇಳಿದರು.೩ [3]ಆಗ ಜೆರುಬ್ಬಾಬೆಲ್, ಯೇಷೂವ ಹಾಗು ಬೇರೆ ಇಸ್ರಯೇಲ್ ಗೋತ್ರಪ್ರಧಾನರು ಅವರಿಗೆ, “ನಮ್ಮ ದೇವರ ಆಲಯವನ್ನು ಕಟ್ಟುವುದರಲ್ಲಿ ನೀವು ನಮ್ಮೊಡನೆ ಸೇರಲೇಕೂಡದು; ಪರ್ಷಿಯರಾಜ ಸೈರಸನಿಂದ ನಮಗಾದ ಅಪ್ಪಣೆಯ ಮೇರೆಗೆ ನಾವೇ ಇಸ್ರಯೇಲ್ ದೇವರಾದ ಸರ್ವೇಶ್ವರನ ಆಲಯವನ್ನು ಕಟ್ಟಬೇಕು,” ಎಂದು ಉತ್ತರಕೊಟ್ಟರು.೪ [4]ಆಗ ಆ ದೇಶನಿವಾಸಿಗಳು ಯೆಹೂದ್ಯರನ್ನು ನಿರಾಶೆಗೊಳಿಸಿ ಅದನ್ನು ಕಟ್ಟದ ಹಾಗೆ ಬೆದರಿಸಿದರು.೫ [5]ಅವರ ಉದ್ದೇಶವನ್ನು ತಡೆಗಟ್ಟಲು ಹಣಕೊಟ್ಟು ವಕೀಲರನ್ನು ಇಟ್ಟರು. ಈ ಪ್ರಕರಣ ಪರ್ಷಿಯರಾಜ ಸೈರಸನ ಕಾಲದಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯವರೆಗೂ ನಡೆಯಿತು.೬ [6]ಇದಲ್ಲದೆ, ಅಹಷ್ಟೇರೋಷನ ಆಳ್ವಿಕೆಯ ಆರಂಭದಲ್ಲಿ ಅವರು ಜುದೇಯ ಹಾಗು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದವರಿಗೆ ವಿರುದ್ಧ ಆಪಾದನ ಪತ್ರವನ್ನು ಬರೆದರು.೭ [7]ಪರ್ಷಿಯರಾಜ ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್, ಈ ಮೊದಲಾದವರು ಅರ್ತಷಸ್ತನಿಗೆ ಪತ್ರ ಬರೆದರು. ಆ ಪತ್ರ ಅರಮಾಯಿಕ್ ಲಿಪಿಯಲ್ಲೂ ಅರಮಾಯಿಕ್ ಭಾಷೆಯಲ್ಲೂ ಇತ್ತು.೮ [8]ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಜೆರುಸಲೇಮಿಗೆ ವಿರೋಧವಾಗಿ ಈ ಕೆಳಗೆ ಕಂಡಂತೆ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದ್ದರು.೯ [9]“ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರು, ಅವರ ಜೊತೆಗಾರರಾದ ದಿನಾಯರು, ಅಪರ್ಸತ್ಕಾಯರು, ಟರ್ಪಲಾಯರು, ಅಪಾರ್ಸಾಯರು, ಯೆರೆಕ್ಯರು, ಬಾಬಿಲೋನಿನವರು, ಶೊಷನಿನವರು.೧೦ [10]ದೆಹಾಯರು, ಏಲಾಮ್ಯರು ಹಾಗು ಮಹಾ ಶ್ರೀಮತ್ ಆಸೆನಪ್ಪರನು ಕರೆದುತಂದು ಸಮಾರಿಯ ಪಟ್ಟಣದಲ್ಲಿ ಮತ್ತು ನದಿಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು, ಬರೆಯುವುದು ಏನೆಂದರೆ:೧೧ [11]ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಈ ರೀತಿಯಾಗಿತ್ತು: ಅರ್ತಷಸ್ತರಾಜರಿಗೆ, ತಮ್ಮ ಸೇವಕರಾದ ನದಿಯ ಈಚೆಯವರು:೧೨ [12]ಅದಾಗಿ, ತಮ್ಮ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಜೆರುಸಲೇಮನ್ನು ಸೇರಿ ರಾಜ ಕಂಟಕವಾದ ಆ ದುಷ್ಟಪಟ್ಟಣವನ್ನೂ ಅದರ ಪೌಳಿಗೋಡೆಯನ್ನೂ ಮತ್ತೆ ಕಟ್ಟುವುದಕ್ಕೆ ಪ್ರಾರಂಭಿಸಿ, ಪೌಳಿಗೋಡೆಯ ಅಸ್ತಿವಾರವನ್ನು ಮುಗಿಸಿದ್ದಾರೆ ಎಂಬುದಾಗಿ ನಾವು ರಾಜರಿಗೆ ಅರಿಕೆಮಾಡಿಕೊಳ್ಳುತ್ತೇವೆ.೧೩ [13]ಆ ಪಟ್ಟಣವನ್ನೂ ಅದರ ಪೌಳಿಗೋಡೆಗಳನ್ನೂ ಕಟ್ಟುವುದು ಮುಗಿಸಿದರೆ ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ; ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.೧೪ [14]ನಾವಾದರೋ ಅರಮನೆಯ ಉಪ್ಪನ್ನು ತಿನ್ನುವವರು; ಅರಸರಿಗೆ ಅಪಮಾನವಾಗುವುದನ್ನು ನೋಡಿ ಸುಮ್ಮನೆ ಇರುವುದು ಉಚಿತವಲ್ಲವೆಂದು ತಿಳಿದು ತಮಗೆ ಈ ಪತ್ರದ ಮೂಲಕ ಸುದ್ದಿ ಕಳುಹಿಸಿದ್ದೇವೆ.೧೫ [15]ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರಗ್ರಂಥದಲ್ಲಿ ಪರಿಶೋಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣ ರಾಜಕಂಟಕವಾದ ಪಟ್ಟಣ. ಅರಸರಿಗೂ ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥ ಪಟ್ಟಣ. ಇದು ಪೂರ್ವಕಾಲದಿಂದಲೂ ದಂಗೆಯೆಬ್ಬಿಸುತ್ತಾ ಬಂದಿದೆ ಎಂದೂ ಹಾಗು ಆ ಕಾರಣದಿಂದಲೇ ನೆಲಸಮವಾಯಿತೆಂದೂ ಆ ಚರಿತ್ರಗ್ರಂಥದಲ್ಲಿ ಕಂಡುಬರುತ್ತದೆ.೧೬ [16]ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ ತಮಗೆ ನದಿಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸರಿಗೆ ಅರಿಕೆ ಮಾಡಿಕೊಳ್ಳುತ್ತೇವೆ.”೧೭ [17]ಈ ಪತ್ರಕ್ಕೆ ಅರಸ ಅವರಿಗೆ ಕೊಟ್ಟ ಉತ್ತರ: “ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರಿಗೂ ಸಮಾರಿಯದಲ್ಲಿರುವ ಅವರ ಜೊತೆಗಾರರಿಗೂ ನದಿಯ ಆಚೆಯಲ್ಲಿರುವ ಇತರರಿಗೂ ಕ್ಷೇಮಾಭಿಲಾಶೆಗಳು;೧೮ [18]ನೀವು ಕಳುಹಿಸಿದ್ದ ಪತ್ರವನ್ನು ನನ್ನ ಸನ್ನಿಧಿಯಲ್ಲಿ ಸ್ಪಷ್ಟವಾಗಿ ಓದಲಾಯಿತು.೧೯ [19]ನನ್ನ ಆಜ್ಞಾನುಸಾರ ವಿಚಾರಣೆಯಾದಾಗ, ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರೋಧವಾಗಿ ಪ್ರತಿಭಟಿಸುತ್ತಾ, ದ್ರೋಹಮಾಡುತ್ತಾ,೨೦ [20]ದಂಗೆಯೆಬ್ಬಿಸುತ್ತಾ ಬಂದಿದ್ದಾರೆ; ಇದಲ್ಲದೆ ಜೆರುಸಲೇಮಿನಲ್ಲಿ ಬಲಿಷ್ಠ ರಾಜರು ಆಳುತ್ತಾ, ನದಿಯಾಚೆಯ ಎಲ್ಲ ಪ್ರದೇಶಗಳಲ್ಲಿ ಅಧಿಕಾರ ನಡೆಸುತ್ತಾ, ಕಪ್ಪ, ತೆರಿಗೆ, ಸುಂಕಗಳನ್ನು ತೆಗೆದುಕೊಳ್ಳುತ್ತಿದ್ದರೆಂದು ಕಂಡುಬಂದಿದೆ.೨೧ [21]ಆದುದರಿಂದ ಆ ಜನರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವವರೆಗೆ ಆ ಪಟ್ಟಣವನ್ನು ಕಟ್ಟಿ ಬಿಡಬಾರದೆಂತಲೂ ಪ್ರಕಟಿಸಿರಿ.೨೨ [22]ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿ.”೨೩ [23]ಅರಸ ಅರ್ತಷಸ್ತನ ಈ ಪತ್ರವನ್ನು ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಇವರ ಮುಂದೆ ಮತ್ತು ಇವರ ಜೊತೆಗಾರರ ಮುಂದೆ ಓದಲಾಯಿತು. ಕೂಡಲೆ ಅವರು ಜೆರುಸಲೇಮಿಗೆ ಶೀಘ್ರವಾಗಿ ಹೋಗಿ, ಬಲಾತ್ಕಾರದಿಂದ ಹಾಗು ಅಧಿಕಾರದಿಂದ ಯೆಹೂದ್ಯರನ್ನು ತಡೆದರು.೨೪ [24]ಅಂದಿನಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಜೆರುಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸ ನಿಂತುಹೋಯಿತು.Kannada Bible (KNCL) 2016 No Data ಕನ್ನಡ ಬೈಬಲ್ (KNCL) 2016 ಎಜ್ರನು ೪ 00:00:00 00:00:00 0.5x 2.0x https://beblia.bible:81/BibleAudio/kannadakncl/ezra/004.mp3 10 4