× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ KSB ೨೦೨೨IRV ೨೦೧೯BSIJV ೨೦೧೬KNCL ೨೦೧೬BSI ೨೦೧೬ERV ೨೦೦೭1 1 1 ಯೋಬನ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೨೮ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧೩೨೩೩೩೪೩೫೩೬೩೭೩೮೩೯೪೦೪೧೪೨1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮1 1 1 ಕನ್ನಡ ಬೈಬಲ್ (KNCL) 2016 ಯೋಬನ ೨೮ ಟಿಪ್ಪಣಿಗಳನ್ನು ಉಳಿಸಿ ೧ [1]“ಬೆಳ್ಳಿ ಸಿಕ್ಕುವ ಗಣಿಯುಂಟು ಚಿನ್ನದ ಅದುರು ದೊರಕುವ ಎಡೆಯುಂಟು.೨ [2]ಕಬ್ಬಿಣವನ್ನು ತೆಗೆಯುತ್ತಾರೆ ಮಣ್ಣಿನಿಂದ ತಾಮ್ರವನ್ನು ಕಡೆಯುತ್ತಾರೆ ಕಲ್ಲನ್ನು ಕರಗಿಸುತಾ.೩ [3]ಮಾನವರು ಹೊರದೂಡುತ್ತಾರೆ ಕತ್ತಲನು ಕತ್ತಲು-ಕಾರ್ಗತ್ತಲಲ್ಲೂ ಹುಡುಕುತ್ತಾರೆ ಲೋಹಗಳನು. ತೋಡುತ್ತಿರುತ್ತಾರೆ ಅವು ದೊರಕುವವರೆಗು.೪ [4]ಗಣಿಯನ್ನು ತೋಡಿತೋಡಿ ಜನನಿವಾಸಿಗಳಿಗೆ ದೂರವಾಗಿ ಮೇಲ್ಗಡೆ ನಡೆದಾಡುವವರನ್ನು ಮರೆತುಹೋಗಿ ಅತ್ತಿತ್ತ ಅಲೆದಾಡುತ್ತಾರೆ ನರಲೋಕಕ್ಕೆ ಅನ್ಯರಾಗಿ.೫ [5]ಭೂಮಿ ಕೊಡುತ್ತದೆ ಆಹಾರವನು ಬೆಂಕಿಬಿದ್ದಂತೆ ಪಾಳಾಗಿರುತ್ತದೆ ಅದರ ಅಡಿಭಾಗವು.೬ [6]ನೀಲಿರತ್ನಗಳು ಸಿಗುತ್ತವೆ ಭುವಿಯ ಕಲ್ಲುಗಳಲಿ ಚಿನ್ನಚಿಗುರು ದೊರಕುತ್ತದೆ ಅದರ ಧೂಳಿನಲಿ.೭ [7]ಆ ದಾರಿ ತಿಳಿಯದು ಯಾವ ಹದ್ದಿಗೂ ಅದು ಬಿದ್ದಿಲ್ಲ ಯಾವ ಗಿಡುಗದ ಕಣ್ಣಿಗೂ.೮ [8]ಕಾಡುಮೃಗಗಳು ಅದನ್ನು ತುಳಿದಿಲ್ಲ ಸಿಂಹವು ಆ ಮಾರ್ಗದಲ್ಲಿ ಸುಳಿದಿಲ್ಲ.೯ [9]ಮಾನವನು ಕೈಮಾಡುತ್ತಾನೆ ಬಂಡೆಗಳ ಮೇಲೆ ಬೆಟ್ಟಗಳನ್ನು ಕೆಡವಿಬಿಡುತ್ತಾನೆ ಬುಡಮಟ್ಟಕೆ.೧೦ [10]ಸುರಂಗಗಳನ್ನು ಕೊರೆಯುತ್ತಾನೆ ಬಂಡೆಗಳಲಿ ಅಮೂಲ್ಯವಾದ ವಸ್ತುಗಳನ್ನು ಕಾಣುತ್ತಾನಲ್ಲಿ.೧೧ [11]ಕಂಡುಹಿಡಿಯುತ್ತಾನೆ ನದಿಗಳ ಮೂಲಗಳನು ಬೆಳಕಿಗೆ ತರುತ್ತಾನೆ ಮರೆಯಾಗಿದ್ದ ವಸ್ತುಗಳನು.೧೨ [12]ಆದರೆ ಸುಜ್ಞಾನ ಸಿಕ್ಕುವುದೆಲ್ಲಿ? ವಿವೇಕ ವಾಸಮಾಡುವುದೆಲ್ಲಿ?೧೩ [13]ಸುಜ್ಞಾನದ ಕ್ರಯ ಯಾರಿಗೂ ಗೊತ್ತಿಲ್ಲ ಜೀವಿತರಲ್ಲಿ ಅದನ್ನು ಕಂಡವರಿಲ್ಲ.೧೪ [14]‘ಅದು ನನ್ನಲ್ಲಿಲ್ಲ’ ಎನ್ನುತ್ತದೆ ಪಾತಾಳ ‘ನನ್ನ ಬಳಿಯಲ್ಲಿಲ್ಲ’ ಎನ್ನುತ್ತದೆ ಸಮುದ್ರ.೧೫ [15]ಚೊಕ್ಕ ಬಂಗಾರಕೊಟ್ಟು ಅದನು ಕೊಂಡುಕೊಳ್ಳಲಾಗದು ಅದರ ಬೆಲೆಗೆ ಬೆಳ್ಳಿಯನು ತೂಕಮಾಡಲಾಗದು.೧೬ [16]ಓಫೀರ್ ದೇಶದ ಅಪರಂಜಿಯಿಂದಲೂ ಅಮೂಲ್ಯ ಗೋಮೇಧಿಕ-ಇಂದ್ರನೀಲದಿಂದಲೂ ಸುಜ್ಞಾನದ ಮೌಲ್ಯವನ್ನು ಗೊತ್ತುಮಾಡಲಾಗದು.೧೭ [17]ಹೊನ್ನಾಗಲಿ, ಗಾಜಾಗಲಿ ಅದಕ್ಕೆ ಸಮವಾದೀತೆ? ಚಿನ್ನಾಭರಣಗಳನ್ನು ಅದಕ್ಕೆ ಅದಲುಬದಲು ಮಾಡಿಕೊಡಲಾದೀತೆ?೧೮ [18]ಸುಜ್ಞಾನವಿರುವಲ್ಲಿ ಹವಳ-ಸ್ಫಟಿಕಗಳು ನೆನಪಿಗೆ ಬಾರವು ಮಾಣಿಕ್ಯಗಳ ಸಂಪಾದನೆಗಿಂತ ಅದರ ಸಂಪಾದನೆ ಶ್ರೇಷ್ಠವು.೧೯ [19]ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಲ್ಲ ಶುದ್ಧ ಕನಕದೊಡನೆ ಅದನು ತೂಕಮಾಡಲಾಗುವುದಿಲ್ಲ.೨೦ [20]ಇಂತಿರಲು ಸುಜ್ಞಾನ ಬರುವುದು ಎಲ್ಲಿಂದ? ವಿವೇಕ ದೊರಕುವುದು ಯಾವ ಸ್ಥಳದಿಂದ?೨೧ [21]ಅದು ಎಲ್ಲ ಜೀವಿಗಳ ಕಣ್ಣಿಗೆ ಅಗೋಚರ ಆಕಾಶದ ಪಕ್ಷಿಗಳಿಗೂ ಅದು ಅಪರಿಚಿತ.೨೨ [22]‘ನಮ್ಮ ಕಿವಿಗೆ ಬಿದ್ದಿದೆ ಅದರ ಸುದ್ದಿ ಮಾತ್ರ’ ಎನ್ನುತ್ತವೆ ಅಧೋಲೋಕ ಹಾಗು ಮೃತ್ಯುಲೋಕ.೨೩ [23]ಸುಜ್ಞಾನದ ಮಾರ್ಗ ಬಲ್ಲವನು ದೇವರೇ ಅದರ ಸ್ಥಳಗೊತ್ತಿದೆ ಆತನೊಬ್ಬನಿಗೆ.೨೪ [24]ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಬಲ್ಲವನು ದೇವರೇ ಆಕಾಶದ ಕೆಳಗಿನ ಸಮಸ್ತವನು ನೋಡಬಲ್ಲವನು ಆತನೊಬ್ಬನೇ!೨೫ [25]ಗಾಳಿಗೆ ತಕ್ಕ ವೇಗವನು ನೇಮಿಸಿದಾಗ ಜಲಕ್ಕೆ ತಕ್ಕ ಜಾಗವನು ನಿರ್ಣಯಿಸಿದಾಗ,೨೬ [26]ಮಳೆಗೆ ಕಟ್ಟಳೆಯನು ವಿಧಿಸಿದಾಗ ಗುಡುಗು ಮಿಂಚಿಗೆ ಮಾರ್ಗವನ್ನೇರ್ಪಡಿಸಿದಾಗ,೨೭ [27]ದೇವರು ಆ ಜ್ಞಾನವನು ಕಂಡು ಪರಿಗಣಿಸಿದನು ಅದನು ಪರಿಶೋಧಿಸಿ ಪ್ರತಿಷ್ಠಾಪಿಸಿದನು.೨೮ [28]ಬಳಿಕ ಮಾನವನಿಗೆ ಇಂತೆಂದನು: ‘ಸರ್ವೇಶ್ವರನಲ್ಲಿ ಭಯಭಕ್ತಿ ಇಡುವುದೇ ಸುಜ್ಞಾನ ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ’.”Kannada Bible (KNCL) 2016 No Data ಕನ್ನಡ ಬೈಬಲ್ (KNCL) 2016 ಯೋಬನ ೨೮ 00:00:00 00:00:00 0.5x 2.0x https://beblia.bible:81/BibleAudio/kannadakncl/job/028.mp3 42 28