× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ Bosnian ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು Aceh Balinese Bugis Pampanga Sasak Shan Waray ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ Adilabad Gondi Ahirani ಬಲೂಚಿ Bundeli Chhattisgarhi Garhwali Kangri Kumaoni Mewari Munda Sadri Seraiki Shekhawati Sylheti ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ Bemba Fon Hadiyya Ibibio Kimbundu Kimiiru Lango Liberian Kreyol Lomwe Mende Morisyen Ndau Nyankole Sena Sidamo Soga Songe Sukuma Tarifit Teso Tiv Zande Dagbani ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ KSB ೨೦೨೨IRV ೨೦೧೯BSIJV ೨೦೧೬KNCL ೨೦೧೬BSI ೨೦೧೬ERV ೨೦೦೭1 1 1 ವಿಮೋಚನಾಕಾಂಡ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೧೩ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧೩೨೩೩೩೪೩೫೩೬೩೭೩೮೩೯೪೦1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨1 1 1 ಕನ್ನಡ ಬೈಬಲ್ (KNCL) 2016 ವಿಮೋಚನಾಕಾಂಡ ೧೩ ಟಿಪ್ಪಣಿಗಳನ್ನು ಉಳಿಸಿ ೧ [1]ಸರ್ವೇಶ್ವರ ಸ್ವಾಮಿ ಮೋಶೆಗೆ,೨ [2]“ಚೊಚ್ಚಲಾಗಿ ಹುಟ್ಟಿದ್ದೆಲ್ಲವನ್ನು ನನಗೆ ಮೀಸಲಾಗಿಡು; ಇಸ್ರಯೇಲರಲ್ಲಿ ಮನುಷ್ಯರಿಗಾಗಲಿ ಪಶುಪ್ರಾಣಿಗಳಿಗಾಗಲಿ ಹುಟ್ಟಿದ ಪ್ರಥಮ ಗರ್ಭಫಲ ನನ್ನದೇ,” ಎಂದು ಹೇಳಿದರು.೩ [3]ಮೋಶೆ ಇಸ್ರಯೇಲರಿಗೆ, “ಗುಲಾಮತನದಲ್ಲಿದ್ದು ಈಜಿಪ್ಟ್ ದೇಶದಿಂದ ಬಿಡುಗಡೆಯಾದ ಈ ದಿನವನ್ನು ನೀವು ಸ್ಮರಿಸಬೇಕು. ಈ ದಿನದಲ್ಲೇ ಸರ್ವೇಶ್ವರ ಸ್ವಾಮಿ ತಮ್ಮ ಭುಜಬಲ ಪ್ರಯೋಗಿಸಿ ನಿಮ್ಮನ್ನು ಅಲ್ಲಿಂದ ವಿಮೋಚಿಸಿದರು. ಈ ದಿನದಂದು ನೀವು ಹುಳಿಬೆರತದ್ದನ್ನು ತಿನ್ನಕೂಡದು.೪ [4]ಚೈತ್ರಮಾಸದ ಈ ದಿನದಂದು ನೀವು ಹೊರಟವರು.೫ [5]ಸರ್ವೇಶ್ವರ ನಿಮ್ಮ ಪೂರ್ವಜರಿಗೆ ಪ್ರಮಾಣವಾಗಿ ಹೇಳಿದಂತೆ ನಿಮ್ಮನ್ನು ಹಾಲೂ ಜೇನೂ ಹರಿಯುವ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ಕರೆದು ತಂದು ಅದನ್ನು ನಿಮಗೆ ಕೊಟ್ಟಾಗ, ನೀವು ಈ ಆಚರಣೆಯನ್ನು ಈ ತಿಂಗಳಿನಲ್ಲೇ ನಡೆಸಬೇಕು.೬ [6]ಏಳು ದಿವಸ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿನದಲ್ಲಿ ಸರ್ವೇಶ್ವರನ ಗೌರವಾರ್ಥ ಹಬ್ಬ ಮಾಡಬೇಕು.೭ [7]ಆ ಏಳು ದಿವಸವು ಹಿಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು. ಮಾತ್ರವಲ್ಲ ನಿಮ್ಮ ಬಳಿಯಲ್ಲಿ ಅಥವಾ ನಿಮ್ಮ ನಾಡಿನಲ್ಲಿ ಹುಳಿಯಾಗಲಿ ಹುಳಿ ಹಿಟ್ಟಾಗಲಿ ಇರಕೂಡದು.೮ [8]ಆ ದಿನ ನೀವು ನಿಮ್ಮ ಮಕ್ಕಳಿಗೆ, “ನಮ್ಮ ಜನರು ಈಜಿಪ್ಟಿನಿಂದ ಹೊರಟು ಬಂದಾಗ ಸರ್ವೇಶ್ವರ ನಮಗೋಸ್ಕರ ಮಾಡಿದ ಉಪಕಾರವನ್ನು ಸ್ಮರಿಸುವುದಕ್ಕಾಗಿ ಈ ಆಚರಣೆಯನ್ನು ನಡೆಸುತ್ತಿದ್ದೇವೆ” ಎಂದು ತಿಳಿಸಬೇಕು. ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದ್ದರಿಂದ ಅವರ ನಿಯಮ ನಮ್ಮ ಬಾಯಿಗೆ ಬರುತ್ತಿರಬೇಕು.೯ [9]ಇದಕ್ಕೆ ಈ ಆಚರಣೆಯು ನಮ್ಮ ಕೈಗೆ ಕಟ್ಟಿದ ಕಂಕಣದಂತೆ, ಹಣೆಗೆ ಕಟ್ಟಿದ ಜ್ಞಾಪಕ ಪಟ್ಟಿಯಂತೆ ಇರುತ್ತದೆ.೧೦ [10]ವರ್ಷವರ್ಷವೂ ನಿಯಮಿತ ಕಾಲದಲ್ಲಿ ಈ ಆಚರಣೆಯನ್ನು ನಡೆಸಬೇಕು.೧೧ [11]“ಸರ್ವೇಶ್ವರ ಸ್ವಾಮಿ ನಿಮಗೂ ನಿಮ್ಮ ಪೂರ್ವಜರಿಗೂ ಕೊಟ್ಟ ವಾಗ್ದಾನದ ಮೇರೆಗೆ ನಿಮ್ಮನ್ನು ಕಾನಾನ್ಯರ ನಾಡಿಗೆ ಬರಮಾಡಿ ಆ ನಾಡನ್ನು ನಿಮಗೆ ಕೊಟ್ಟನಂತರ೧೨ [12]ನಿಮಗೂ ನಿಮ್ಮ ಪಶುಪ್ರಾಣಿಗಳಿಗೂ ಹುಟ್ಟುವ ಚೊಚ್ಚಲು ಫಲವನ್ನೆಲ್ಲ, ಅವು ಗಂಡಾದ ಪಕ್ಷಕ್ಕೆ, ಸರ್ವೇಶ್ವರನ ಪಾಲೆಂದು ತಿಳಿದು ಅವರಿಗೆ ಸಮರ್ಪಿಸಬೇಕು.೧೩ [13]ಆದರೆ ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೇಮರಿಯನ್ನು ಬಿಡಿಸಿಕೊಳ್ಳಬಹುದು; ಹಾಗೆ ಬಿಡಿಸಲಾಗದೆ ಹೋದರೆ ಅದರ ಕುತ್ತಿಗೆ ಮುರಿದು ಕೊಲ್ಲಬೇಕು. ಮನುಷ್ಯರ ಚೊಚ್ಚಲ ಗಂಡನ್ನಾದರೋ ಬದಲುಕೊಟ್ಟು ಬಿಡಿಸಿಕೊಳ್ಳಲೇಬೇಕು.೧೪ [14]ಇನ್ನು ಮುಂದೆ ನಿಮ್ಮ ಮಕ್ಕಳು, ಇದರ ಅರ್ಥವೇನೆಂದು ವಿಚಾರಿಸುವಾಗ ನೀವು ಅವರಿಗೆ, ‘ನಾವು ಗುಲಾಮತನದಲ್ಲಿದ್ದಾಗ ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ಈಜಿಪ್ಟಿನಿಂದ ನಮ್ಮನ್ನು ಬಿಡುಗಡೆ ಮಾಡಿದರು.೧೫ [15]ಫರೋಹನು ಹಟಹಿಡಿದು ನಮ್ಮನ್ನು ಹೋಗಗೊಡಿಸದೆ ಇದ್ದಾಗ ಸರ್ವೇಶ್ವರ ಈಜಿಪ್ಟಿನಲ್ಲಿದ್ದ ಚೊಚ್ಚಲು ಮಕ್ಕಳನ್ನು ಹಾಗು ಪಶುಪ್ರಾಣಿಗಳ ಚೊಚ್ಚಲು ಮರಿಗಳನ್ನೂ ಅಂತೂ ಈ ದೇಶದಲ್ಲಿ ಚೊಚ್ಚಲಾಗಿದ್ದುದೆಲ್ಲವನ್ನು ಸಂಹಾರ ಮಾಡಿದರು. ಆದಕಾರಣ ಗಂಡಾದ ಪ್ರಥಮ ಗರ್ಭಫಲವನ್ನೆಲ್ಲಾ ನಾವು ಸರ್ವೇಶ್ವರನಿಗೆ ಸಮರ್ಪಿಸುತ್ತೇವೆ. ಮನುಷ್ಯರಿಗೆ ಹುಟ್ಟಿದ ಪ್ರಥಮ ಗರ್ಭಫಲವನ್ನಾದರೋ ಬದಲು ಕೊಟ್ಟು ಬಿಡಿಸಿಕೊಳ್ಳುತ್ತೇವೆ,” ಎಂದು ಹೇಳಬೇಕು.೧೬ [16]ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಈ ಸಂದೇಶವನ್ನು ನೀವು ನೆನಪಿನಲ್ಲಿಡಬೇಕು. ಇದಕ್ಕೆ ಈ ಪದ್ಧತಿಯು ನಿಮ್ಮ ಕೈಗೆ ಕಟ್ಟಿದ ಕಂಕಣದಂತಿರುತ್ತದೆ, ಹಣೆಗೆ ಕಟ್ಟಿದ ಜ್ಞಾಪಕಪಟ್ಟಿಯಂತಿರುತ್ತದೆ.೧೭ [17]ಫರೋಹನು ಇಸ್ರಯೇಲರಿಗೆ ಹೋಗಲು ಅಪ್ಪಣೆಕೊಟ್ಟಾಗ ದೇವರು ಅವರನ್ನು ಹತ್ತಿರವಾಗಿದ್ದ ಫಿಲಿಷ್ಟಿಯರ ಪ್ರಾಂತ್ಯದ ಮಾರ್ಗವಾಗಿ ಕರೆದುತರಲಿಲ್ಲ. ಬದಲಿಗೆ ಕೆಂಪು ಸಮುದ್ರದ ಬಳಿಯಿರುವ ಮರುಳುಗಾಡಿನ ಬಳಸು ದಾರಿಯಲ್ಲೇ ನಡೆಸಿಕೊಂಡು ಬಂದರು. ಏಕೆಂದರೆ, “ಯುದ್ಧ ತೊಡಗಿದರೆ ಇವರು ಎದೆಗೆಟ್ಟು ಈಜಿಪ್ಟಿಗೆ ಹಿಂದಿರುಗಿಯಾರು” ಎಂದುಕೊಂಡರು ದೇವರು.೧೮ [18]ಇಸ್ರಯೇಲರು ಯುದ್ಧಸನ್ನದ್ಧ ಆಗಿಯೇ ಈಜಿಪ್ಟಿನಿಂದ ಹೊರಟರು.೧೯ [19]ಇದಲ್ಲದೆ ಜೋಸೆಫನು ಇಸ್ರಯೇಲರಿಗೆ, “ಖಂಡಿತವಾಗಿ ದೇವರು ನಿಮ್ಮ ನೆರವಿಗೆ ಬರುವರು; ತಮ್ಮ ವಾಗ್ದಾನವನ್ನು ಈಡೇರಿಸುವರು. ನೀವು ಹೋಗುವಾಗ ನನ್ನ ಶವವನ್ನು ನಿಮ್ಮ ಸಂಗಡ ತೆಗೆದುಕೊಂಡು ಹೋಗಬೇಕು” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು. ಆದುದರಿಂದಲೆ ಮೋಶೆ ಅವನ ಶವವನ್ನು ತನ್ನ ಸಂಗಡ ತೆಗೆದುಕೊಂಡು ಹೋದನು.೨೦ [20]ಇಸ್ರಯೇಲರು ಸುಕ್ಕೋತಿನಿಂದ ಪ್ರಯಾಣಮಾಡಿ ಮರುಳುಗಾಡಿನ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.೨೧ [21]ಸರ್ವೇಶ್ವರ ಸ್ವಾಮಿ ಅವರಿಗೆ ಹಗಲು ಹೊತ್ತಿನಲ್ಲಿ ದಾರಿತೋರಿಸಲು ಮೇಘಸ್ತಂಭ ರೂಪದಲ್ಲೂ ರಾತ್ರಿವೇಳೆಯಲ್ಲಿ ಬೆಳಕನ್ನೀಯಲು ಅಗ್ನಿಸ್ತಂಭ ರೂಪದಲ್ಲೂ ಅವರ ಮುಂದೆ ಸಾಗಿದರು. ಹೀಗೆ ಅವರು ಹಗಲಿರುಳು ಪ್ರಯಾಣ ಮಾಡಿದರು.೨೨ [22]ಹಗಲಿನಲ್ಲಿ ಮೇಘಸ್ತಂಭ, ರಾತ್ರಿಯಲ್ಲಿ ಅಗ್ನಿಸ್ತಂಭ ತಪ್ಪದೆ ಕಾಣಿಸುತ್ತಿದ್ದವು.Kannada Bible (KNCL) 2016 No Data ಕನ್ನಡ ಬೈಬಲ್ (KNCL) 2016 ವಿಮೋಚನಾಕಾಂಡ ೧೩ 00:00:00 00:00:00 0.5x 2.0x https://beblia.bible:81/BibleAudio/kannadakncl/exodus/013.mp3 40 13