× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ Bosnian Kabardian ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ Tibetian ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು Aceh Balinese Bugis Pampanga Sasak Shan Waray ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ Adilabad Gondi Ahirani ಬಲೂಚಿ Bundeli Chhattisgarhi Garhwali Kangri Kumaoni Mewari Munda Sadri Seraiki Shekhawati Sylheti Bagri Bhilali Bodo Braj Tulu ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ Mazanderani ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ Bemba Fon Hadiyya Ibibio Kimbundu Kimiiru Lango Liberian Kreyol Lomwe Mende Morisyen Ndau Nyankole Sena Sidamo Soga Songe Sukuma Tarifit Teso Tiv Zande Dagbani Edo Kituba ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ [2016] ಕನ್ನಡ ಸಮಕಾಲಿಕ ೨೦೨೨ [2022]ಇಂಡಿಯನ್ ರಿವೈಜ್ಡ್ ೨೦೧೯ [2019]ಕನ್ನಡ ಸತ್ಯವೇದವು ೨೦೧೬ [2016]KNCL ೨೦೧೬ [2016]BSI ೨೦೧೬ [2016]ಪರಿಶುದ್ದ ಬೈಬಲ್ ೧೯೯೭ [1997]1 1 1 ವಿಮೋಚನಾಕಾಂಡ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೧೯ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧೩೨೩೩೩೪೩೫೩೬೩೭೩೮೩೯೪೦1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫1 1 1 ಕನ್ನಡ ಬೈಬಲ್ (KNCL) 2016 ವಿಮೋಚನಾಕಾಂಡ ೧೯ ಟಿಪ್ಪಣಿಗಳನ್ನು ಉಳಿಸಿ ೧ [1]ಇಸ್ರಯೇಲರು ಈಜಿಪ್ಟ್ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿವಸದಲ್ಲಿ ಸೀನಾಯಿ ಮರುಭೂಮಿಗೆ ಬಂದರು.೨ [2]ಅವರು ರೆಫೀದೀಮನ್ನು ಬಿಟ್ಟು ಆ ಮರುಭೂಮಿಗೆ ಬಂದು ಅಲ್ಲಿನ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು.೩ [3]ಮೋಶೆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಬಂದನು. ಸರ್ವೇಶ್ವರ ಸ್ವಾಮಿ ಬೆಟ್ಟದ ಮೇಲಿಂದ ಕೂಗಿ ಅವನಿಗೆ, “ನೀನು ಯಕೋಬನ ಮನೆತನದವರಾದ ಇಸ್ರಯೇಲರಿಗೆ ಈ ಮಾತುಗಳನ್ನು ಹೇಳು:೪ [4]'ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದ್ದೀರಿ. ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತು ಈ ನನ್ನ ಸ್ಥಳಕ್ಕೆ ಸೇರಿಸಿದ್ದೇನೆ. ಇದೆಲ್ಲಾ ನಿಮಗೆ ಗೊತ್ತಿದೆ.೫ [5]ಹೀಗಿರಲು, ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ನೀಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ, ಸಮಸ್ತ ಭೂಮಿ ನನ್ನದಾಗಿದ್ದರೂ ನೀವು ಎಲ್ಲ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗುವಿರಿ.೬ [6]ಅಲ್ಲದೆ ನೀವು ನನಗೆ ಯಾಜಕ ರಾಜವಂಶ ಹಾಗು ಪರಿಶುದ್ಧ ಜನಾಂಗ ಆಗುವಿರಿ,’ ಇಸ್ರಯೇಲರಿಗೆ ನೀನು ತಿಳಿಸಬೇಕಾದ ವಿಷಯವಿದು,” ಎಂದರು.೭ [7]ಮೋಶೆ ಇಳಿದುಬಂದು ಜನರ ಹಿರಿಯರನ್ನು ಕೂಡಿಸಿ, ಸರ್ವೇಶ್ವರ ಆಜ್ಞಾಪಿಸಿದ್ದ ಆ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು.೮ [8]ಜನರೆಲ್ಲರು, “ಸರ್ವೇಶ್ವರ ಸ್ವಾಮಿ ಹೇಳಿದಂತೆಯೇ ನಾವು ಮಾಡುತ್ತೇವೆ,” ಎಂದು ಒಕ್ಕೊರಲಿನಿಂದ ಉತ್ತರಕೊಟ್ಟರು. ಮೋಶೆ ಸರ್ವೇಶ್ವರನ ಬಳಿಗೆ ಹೋಗಿ ಜನರ ಆ ಉತ್ತರವನ್ನು ಅರಿಕೆ ಮಾಡಿದನು.೯ [9]ಸರ್ವೇಶ್ವರ ಮೋಶೆಗೆ, “ಇಗೋ, ನಾನು ನಿನ್ನ ಸಂಗಡ ಮಾತಾಡುವುದನ್ನು ಜನರು ಕೇಳುವಂತೆಯೂ ಎಂದಿಗೂ ನಿನ್ನನ್ನು ನಂಬುವಂತೆಯೂ ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬರುತ್ತೇನೆ,” ಎಂದು ಹೇಳಿದರು.೧೦ [10]ಮೋಶೆ ಜನರ ಮಾತುಗಳನ್ನು ಸರ್ವೇಶ್ವರನಿಗೆ ಅರಿಕೆಮಾಡಲು ಸರ್ವೇಶ್ವರ ಹೀಗೆಂದರು: “ನೀನು ಜನರ ಬಳಿಗೆ ಹೋಗಿ ಇಂದು ಮತ್ತು ನಾಳೆ ಅವರನ್ನು ಪರಿಶುದ್ಧಗೊಳಿಸು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಳ್ಳಲಿ.೧೧ [11]ಮೂರನೆಯ ದಿನ ಸಿದ್ಧರಾಗಿರಲಿ. ಏಕೆಂದರೆ ಆ ಮೂರನೆಯ ದಿನ ಸರ್ವೇಶ್ವರನಾದ ನಾನು ಸಮಸ್ತ ಜನರಿಗೂ ಪ್ರತ್ಯಕ್ಷನಾಗಲು ಸೀನಾಯಿ ಬೆಟ್ಟದ ಮೇಲೆ ಇಳಿದು ಬರುವೆನು.೧೨ [12]ಜನರು ಹತ್ತಿರಕ್ಕೆ ಬಾರದಂತೆ ನೀನು ಬೆಟ್ಟದ ಸುತ್ತಲೂ ಒಂದು ಮೇರೆಯನ್ನು ಏರ್ಪಡಿಸು. ಮತ್ತು ಜನರಿಗೆ ‘ಎಚ್ಚರಿಕೆ, ನೀವು ಈ ಬೆಟ್ಟವನ್ನು ಏರಕೂಡದು; ಅದರ ಅಂಚನ್ನೂ ಮುಟ್ಟಕೂಡದು. ಮುಟ್ಟಿದವನಿಗೆ ಮರಣ ಶಿಕ್ಷೆಯಾಗುವುದು ನಿಶ್ಚಯ.೧೩ [13]ಅಂಥವನನ್ನು ಯಾರೂ ಕೈಯಿಂದ ಮುಟ್ಟದೆ ಕಲ್ಲೆಸೆದು ಅಥವಾ ಬಾಣಬಿಟ್ಟು ಕೊಲ್ಲಬೇಕು. ಬೆಟ್ಟವನ್ನು ಮುಟ್ಟಿದವರು ಮನುಷ್ಯನಾಗಿರಲಿ, ಪಶುಪ್ರಾಣಿಯಾಗಲಿ ಉಳಿಯಬಾರದು.’ ಕೊಂಬಿನ ಧ್ವನಿ ಕೇಳಿಸಿದಾಗ ಬೆಟ್ಟವನ್ನೇರಿ ಬರಬೇಕೆಂದು ಹೇಳು.”೧೪ [14]ಅಂತೆಯೇ ಮೋಶೆ ಬೆಟ್ಟದಿಂದ ಇಳಿದು ಬಂದು ಜನರನ್ನು ಪರಿಶುದ್ಧಗೊಳಿಸಿದನು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಂಡರು.೧೫ [15]ಆಗ ಮೋಶೆ ಜನರಿಗೆ, “ಮೂರನೆಯ ದಿನಕ್ಕಾಗಿ ಸಿದ್ಧರಾಗಿರಿ; ಯಾವ ಪುರುಷನು ಸ್ತ್ರೀಸಂಗ ಮಾಡಬಾರದು,” ಎಂದು ಹೇಳಿದನು.೧೬ [16]ಮೂರನೆಯ ದಿನ ಸೂರ್ಯೋದಯ ಆಗುವಾಗ ಆ ಬೆಟ್ಟದ ಮೇಲೆ ಗುಡುಗು, ಮಿಂಚು, ಕಾರ್ಮುಗಿಲು ಹಾಗು ತುತೂರಿಯ ಮಹಾಧ್ವನಿ ಉಂಟಾಯಿತು. ಪಾಳೆಯದಲ್ಲಿದ್ದ ಜನರೆಲ್ಲರು ನಡುಗಿದರು.೧೭ [17]ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಬರಮಾಡಿದನು. ಅವರು ಬಂದು ಬೆಟ್ಟದ ಬುಡದಲ್ಲಿ ನಿಂತರು.೧೮ [18]ಸೀನಾಯಿ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತ್ತು. ಏಕೆಂದರೆ ಸರ್ವೇಶ್ವರ ಸ್ವಾಮಿ ಬೆಂಕಿಯ ರೂಪದಲ್ಲಿ ಆ ಬೆಟ್ಟದ ಮೇಲೆ ಇಳಿದುಬಂದಿದ್ದರು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದೂ ಅಲ್ಲದೆ ಬೆಟ್ಟವೆಲ್ಲ ಬಹಳವಾಗಿ ಕಂಪಿಸಿತು.೧೯ [19]ತುತೂರಿಯ ಧ್ವನಿ ಹೆಚ್ಚು ಹೆಚ್ಚಾಗುತ್ತಾ ಬಂದಿತು. ಮೋಶೆ ಮಾತಾಡಿದಾಗ ದೇವರು ಮೇಘಗರ್ಜನೆಯಿಂದ ಉತ್ತರಕೊಟ್ಟರು.೨೦ [20]ಸರ್ವೇಶ್ವರ ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದರು. ಅವರು, “ಬೆಟ್ಟದ ತುದಿಗೆ ಬಾ,” ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.೨೧ [21]ಆಗ ಸರ್ವೇಶ್ವರ ಮೋಶೆಗೆ, “ನೀನಿಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ನೋಡಬೇಕೆಂಬ ಆಶೆಯಿಂದ ಸರ್ವೇಶ್ವರನಾದ ನನ್ನ ಹತ್ತಿರಕ್ಕೆ ಮೇರೆಯನ್ನು ದಾಟಿ ಬಂದಾರು; ಹಾಗೆ ಬಂದರೆ ಬಹುಜನ ನಾಶವಾಗುವರು.೨೨ [22]ನನ್ನ ಸನ್ನಿಧಿಗೆ ಬರುವ ಯಾಜಕರು ಕೂಡ ತಮ್ಮನ್ನೇ ಶುದ್ಧಪಡಿಸಿಕೊಳ್ಳಬೇಕು. ಇಲ್ಲವಾದರೆ ಅವರನ್ನೂ ನಾನು ತಟ್ಟನೆ ನಾಶಮಾಡುವೆನು,” ಎಂದು ಹೇಳಿದರು.೨೩ [23]ಅದಕ್ಕೆ ಮೋಶೆ, “ಸೀನಾಯಿ ಬೆಟ್ಟವನ್ನೇರುವುದಕ್ಕೆ ಜನರಿಂದಾಗದು. ನೀವು ಆಜ್ಞಾಪಿಸಿದಂತೆ ನಿಮಗಾಗಿ ಪ್ರತ್ಯೇಕಿಸಿಡಲು ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿಸಿದ್ದೇನೆ,” ಎಂದನು.೨೪ [24]ಸರ್ವೇಶ್ವರ ಅವನಿಗೆ, “ನೀನು ಇಳಿದು ಹೋಗಿ ಆರೋನನನ್ನು ಕರೆದುಕೊಂಡು ಮೇಲಕ್ಕೆ ಬಾ; ಆದರೆ ಯಾಜಕರು ಹಾಗು ಜನರು ಆ ಮೇರೆಯನ್ನು ದಾಟಿ ನನ್ನ ಹತ್ತಿರ ಬರಕೂಡದು; ದಾಟಿ ಬಂದರೆ ಅವರನ್ನು ತಟ್ಟನೆ ನಾಶಮಾಡಬಹುದು ಎಂದು ಹೇಳು,” ಎಂದರು.೨೫ [25]ಮೋಶೆ ಇಳಿದು ಹೋಗಿ ಹಾಗೆಯೇ ಜನರಿಗೆ ತಿಳಿಸಿದನು.Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide ಕನ್ನಡ ಬೈಬಲ್ (KNCL) 2016 ವಿಮೋಚನಾಕಾಂಡ ೧೯ 00:00:00 00:00:00 0.5x 2.0x https://beblia.bible:81/BibleAudio/kannadakncl/exodus/019.mp3 40 19