× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ KSB ೨೦೨೨IRV ೨೦೧೯BSIJV ೨೦೧೬KNCL ೨೦೧೬BSI ೨೦೧೬ERV ೨೦೦೭1 1 1 ಜ್ಞಾನೋಕ್ತಿಗಳು ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೩೦ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧೩೨೩೩1 1 1 ಕನ್ನಡ ಬೈಬಲ್ (KNCL) 2016 ಜ್ಞಾನೋಕ್ತಿಗಳು ೩೦ ಟಿಪ್ಪಣಿಗಳನ್ನು ಉಳಿಸಿ ೧ [1]ಮಸ್ಸಾಗೆ ಸೇರಿದ ಜಾಕೆ ಎಂಬುವವನ ಮಗ ಆಗೂರನ ಹಿತೋಕ್ತಿಗಳು: ಈತನು ಇಥಿಯೇಲನಿಗೆ ಹಾಗೂ ಉಕ್ಕಾಲನಿಗೆ ಮಾಡಿದ ಪ್ರವಾದನೆ:೨ [2]ಮಾನವರಲ್ಲಿ ನನ್ನಂಥ ಪಶುಪ್ರಾಯನಿಲ್ಲ; ಮನುಷ್ಯ ವಿವೇಕವೂ ನನಗಿಲ್ಲ.೩ [3]ಜ್ಞಾನವನ್ನು ನಾನು ಪಡೆದುಕೊಂಡಿಲ್ಲ; ಪರಮಪಾವನರ ತಿಳುವಳಿಕೆ ನನಗಿಲ್ಲ.೪ [4]ಆಕಾಶಕ್ಕೆ ಏರಿ ಮರಳಿದವನು ಯಾರು? ಮುಷ್ಟಿಯಲ್ಲಿ ಗಾಳಿಯನ್ನು ಹಿಡಿದಿಟ್ಟವನು ಯಾರು? ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಎಲ್ಲೆಮೇರೆಗಳನ್ನು ನಿಗದಿಮಾಡಿದವನು ಯಾರು? ಆತನ ಹೆಸರೇನು? ಆತನ ಮಗನ ಹೆಸರೇನು? ಬಲ್ಲೆಯಾ?೫ [5]ದೇವರ ಒಂದೊಂದು ಮಾತೂ ಪರಿಶುದ್ಧ; ಆತನೇ ಶರಣರ ಖೇಡ್ಯ;೬ [6]ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಇಲ್ಲವಾದರೆ ಆತ ನಿನ್ನನ್ನು ಖಂಡಿಸಿಯಾನು, ನೀನು ಸುಳ್ಳುಗಾರನಾಗಿ ತೋರಿಬಂದೀಯೆ!೭ [7]ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ: ನಿರಾಕರಿಸಬೇಡ, ನಾನು ಸಾಯುವುದರೊಳಗೆ ಅವುಗಳನ್ನು ಅನುಗ್ರಹಿಸು:೮ [8]ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು.೯ [9]ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.೧೦ [10]ದಾಸನ ವಿರುದ್ಧ ದಣಿಗೆ ದೂರು ಹೇಳಬೇಡ; ಅವನು ನಿನ್ನನ್ನು ಶಪಿಸಾನು, ನಿನ್ನಲ್ಲೆ ದೋಷ ಕಂಡುಬಂದೀತು.೧೧ [11]ತಂದೆಯನ್ನೇ ಶಪಿಸುವ, ತಾಯಿಗು ಮರ್ಯಾದೆಯನ್ನೂ ತರದ ಮಕ್ಕಳುಂಟು.೧೨ [12]ತಮ್ಮ ಕೊಳೆಯನ್ನು ತೊಳೆದುಕೊಳ್ಳದ, ತಾವೆ ಪರಿಶುದ್ಧರೆಂದು ಎಣಿಸಿಕೊಳ್ಳುವ ಜನರುಂಟು.೧೩ [13]ಮೇಲಿಂದ ಮೇಲಕ್ಕೆ ದೃಷ್ಟಿಸಿ ನೋಡುವ, ಠೀವಿಯಿಂದ ಕಣ್ಣುರೆಪ್ಪೆಗಳನ್ನೇರಿಸುವ ಜನರುಂಟು.೧೪ [14]ಖಡ್ಗದಂಥ ಹಲ್ಲುಗಳು, ಕತ್ತಿಯಂಥ ಕೋರೆಗಳೂ ಉಳ್ಳವರಿದ್ದಾರೆ. ನಾಡಿನ ಬಡವರನ್ನು ಇವರು ತಿಂದುಬಿಡುವರು; ಜನರಲ್ಲಿ ದಿಕ್ಕಿಲ್ಲದವರನ್ನು ಇವರು ನುಂಗಿಬಿಡುವರು.೧೫ [15]ಜಿಗಣೆಗೆ “ಕೊಡು, ಕೊಡು” ಎಂಬ ಇಬ್ಬರು ಹೆಣ್ಣು ಮಕ್ಕಳುಂಟು; ಎಂದೂ ತೃಪ್ತಿಪಡೆಯದವು ಮೂರುಂಟು; ಹೌದು, ‘ಸಾಕು’ ಎನ್ನದವುಗಳು ನಾಲ್ಕುಂಟು:೧೬ [16]ಅವು ಯಾವುದೆಂದರೆ: ಪಾತಾಳ, ಹೆರದ ಗರ್ಭ, ನೀರಿಗಾಗಿ ಹಾತೊರೆಯುವ ಭೂಮಿ, ‘ಸಾಕಾಯಿತು’ ಎನ್ನದ ಬೆಂಕಿ.೧೭ [17]ತಂದೆಯನ್ನು ಪರಿಹಾಸ್ಯಮಾಡುವ ಕಣ್ಣನ್ನು, ತಾಯಿಯ ಆಜ್ಞೆಯನ್ನು ಧಿಕ್ಕರಿಸುವ ನೇತ್ರವನ್ನು ಹಳ್ಳಕೊಳ್ಳದ ಕಾಗೆಗಳು ಕುಕ್ಕುವುವು, ರಣಹದ್ದುಗಳು ತಿಂದುಬಿಡುವುವು.೧೮ [18]ನನ್ನ ಅರಿವಿಗೆ ಬಾರದ ಮೂರು ವಿಷಯಗಳಿವೆ: ಹೌದು, ನನ್ನ ಬುದ್ಧಿಗೆ ಎಟುಕದವು ನಾಲ್ಕಿವೆ:೧೯ [19]ಅವು ಯಾವುವೆಂದರೆ: ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಯುವಕ-ಯುವತಿಯರ ಪರಸ್ಪರ ಆಕರ್ಷಣೆ.೨೦ [20]ವ್ಯಭಿಚಾರಿಣಿಯ ವರ್ತನೆ ಹೀಗಿದೆ: ಅವಳು ಉಣ್ಣುತ್ತಾಳೆ, ಬಾಯಿ ಒರೆಸಿಕೊಳ್ಳುತ್ತಾಳೆ. ಬಳಿಕ ‘ನಾನು ತಪ್ಪುಮಾಡಲಿಲ್ಲವಲ್ಲಾ’ ಎನ್ನುತ್ತಾಳೆ.೨೧ [21]ಜಗತ್ತು ಮೂರು ವಿಷಯಗಳ ನಿಮಿತ್ತ ಕಂಪಿಸುತ್ತದೆ: ನಾಲ್ಕರ ನಿಮಿತ್ತವೂ ಹೊರೆ ತಾಳಲಾರದಂತೆ ಆಗುತ್ತದೆ:೨೨ [22]ಅವು ಯಾವುವೆಂದರೆ: ಅರಸನಾದ ಆಳು, ಹೊಟ್ಟೆ ತುಂಬಿಸಿಕೊಂಡು ಸುತ್ತಾಡುವ ನೀಚ,೨೩ [23]ಯಾರಿಗೂ ಬೇಡವಾದವಳಾಗಿದ್ದ ಮದುವೆಯಾದ ಚಂಡಿ, ಧರ್ಮಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ.೨೪ [24]ಚಿಕ್ಕವು ಆದರೂ ದೊಡ್ಡ ಜ್ಞಾನವುಳ್ಳ ನಾಲ್ಕು ಜಂತುಗಳುಂಟು:೨೫ [25]ಇರುವೆಗಳು - ಬಲಹೀನ ಜಂತುಗಳು, ಆದರೂ ಸುಗ್ಗಿಯಲ್ಲೆ ಆಹಾರವನ್ನು ಸೇರಿಸಿಟ್ಟುಕೊಳ್ಳುತ್ತವೆ;೨೬ [26]ಬೆಟ್ಟದ ಮೊಲಗಳು - ದೊಡ್ಡ ಪ್ರಾಣಿಗಳೇನೂ ಅಲ್ಲ, ಆದರೂ ಬಂಡೆಗಳ ಬಿರುಕುಗಳಲ್ಲಿ ಮನೆಮಾಡಿಕೊಳ್ಳುತ್ತವೆ;೨೭ [27]ಮಿಡತೆಗಳು - ಅವಕ್ಕೆ ಅರಸನಿಲ್ಲ, ಆದರೂ ಅವೆಲ್ಲ ದಂಡುದಂಡಾಗಿ ಹೊರಡುತ್ತವೆ;೨೮ [28]ಹಲ್ಲಿ - ಅಂಗೈ ಆಸರೆ ಪಡೆವ ಪ್ರಾಣಿ, ಆದರೂ ಅರಮನೆಗಳಲ್ಲಿ ವಾಸ ಮಾಡುತ್ತದೆ.೨೯ [29]ಗಂಭೀರ ಗಮನದ ಮೂರು ಪ್ರಾಣಿಗಳುಂಟು: ಹೌದು ಗಂಭೀರ ಗತಿಯ ನಾಲ್ಕನೆಯ ಪ್ರಾಣಿಯೂ ಉಂಟು:೩೦ [30]ಯಾವುದಕ್ಕೂ ಹೆದರಿ ಓರೆಯಾಗದ ಮೃಗರಾಜನಾದ ಸಿಂಹ,೩೧ [31]ಕತ್ತೆತ್ತಿ ನಡೆಯುವ ಹುಂಜ, ಮಂದೆಗೆ ಮುಂದೆ ಹೋಗುವ ಹೋತ, ಸೈನ್ಯಸಮೇತನಾದ ರಾಜ.೩೨ [32]ನೀನು ಗರ್ವದಿಂದ ಮೂರ್ಖನಾಗಿ ನಡೆದಿದ್ದರೆ, ದುರಾಲೋಚನೆಯನ್ನು ಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೊ.೩೩ [33]ಹಾಲು ಕಡೆಯುವುದರಿಂದ ಬೆಣ್ಣೆ; ಮೂಗು ಹಿಂಡುವುದರಿಂದ ರಕ್ತ; ಕೋಪ ಎಬ್ಬಿಸುವುದರಿಂದ ಜಗಳ.Kannada Bible (KNCL) 2016 No Data ಕನ್ನಡ ಬೈಬಲ್ (KNCL) 2016 ಜ್ಞಾನೋಕ್ತಿಗಳು ೩೦ 00:00:00 00:00:00 0.5x 2.0x https://beblia.bible:81/BibleAudio/kannadakncl/proverbs/030.mp3 31 30