× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ Bosnian Kabardian ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ Tibetian ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು Aceh Balinese Bugis Pampanga Sasak Shan Waray ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ Adilabad Gondi Ahirani ಬಲೂಚಿ Bundeli Chhattisgarhi Garhwali Kangri Kumaoni Mewari Munda Sadri Seraiki Shekhawati Sylheti Bagri Bhilali Bodo Braj Tulu ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ Mazanderani ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ Bemba Fon Hadiyya Ibibio Kimbundu Kimiiru Lango Liberian Kreyol Lomwe Mende Morisyen Ndau Nyankole Sena Sidamo Soga Songe Sukuma Tarifit Teso Tiv Zande Dagbani Edo Kituba ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ [2016] ಕನ್ನಡ ಸಮಕಾಲಿಕ ೨೦೨೨ [2022]ಇಂಡಿಯನ್ ರಿವೈಜ್ಡ್ ೨೦೧೯ [2019]ಕನ್ನಡ ಸತ್ಯವೇದವು ೨೦೧೬ [2016]KNCL ೨೦೧೬ [2016]BSI ೨೦೧೬ [2016]ಪರಿಶುದ್ದ ಬೈಬಲ್ ೧೯೯೭ [1997]1 1 1 ಉಪದೇಷಕ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೨ ೧೨೩೪೫೬೭೮೯೧೦೧೧೧೨1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬1 1 1 ಕನ್ನಡ ಬೈಬಲ್ (KNCL) 2016 ಉಪದೇಷಕ ೨ ಟಿಪ್ಪಣಿಗಳನ್ನು ಉಳಿಸಿ ೧ [1]“ಬಾ ಮನವೇ, ಸಂತೋಷದ ಮೂಲಕ ನಿನ್ನನ್ನು ಪರೀಕ್ಷಿಸುವೆ; ಸುಖಭೋಗವನ್ನು ಅನುಭವಿಸು” ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ಆದರೆ ಇದೂ ವ್ಯರ್ಥವೇ ಸರಿ.೨ [2]“ನಗೆ ಹುಚ್ಚುತನ, ಸುಖಭೋಗ ನಿಷ್ಪ್ರಯೋಜಕ” ಎಂದುಕೊಂಡೆ.೩ [3]ದೇಹಕ್ಕೆ ಮಧುಪಾನ ಮಾಡಿಸೋಣ; ಮೂರ್ಖತನದಲ್ಲಿ ತಲ್ಲೀನನಾಗೋಣ; ಜೀವಮಾನದ ಅಲ್ಪಕಾಲದಲ್ಲಿ ನರಮಾನವನಿಗೆ ಧರೆಯಲ್ಲಿ ಯಾವುದು ಹಿತ ಎಂದು ತಿಳಿದುಕೊಳ್ಳೋಣ” ಎಂದು ಜ್ಞಾನಾಶಕ್ತನಾದ ನಾನು ಮನಸ್ಸಿನಲ್ಲೇ ಅಂದುಕೊಂಡೆ.೪ [4]ಮಹತ್ಕಾರ್ಯಗಳನ್ನು ಎಸಗಿದೆ; ಮನೆಮಾರುಗಳನ್ನು ಕಟ್ಟಿಸಿಕೊಂಡೆ;೫ [5]ತೋಟ ಉದ್ಯಾನವನಗಳನ್ನು ಬೆಳೆಸಿದೆ. ಅವುಗಳಲ್ಲಿ ನಾನಾ ತರದ ಫಲವೃಕ್ಷಗಳನ್ನು ನಾಟಿಮಾಡಿಸಿದೆ.೬ [6]ಬೆಳೆಯುವ ಗಿಡತೋಟಗಳಿಗೆ ನೀರುಹಾಯಿಸಲು ಕೆರೆಕುಂಟೆಗಳನ್ನು ತೋಡಿಸಿದೆ.೭ [7]ಗಂಡು ಹೆಣ್ಣಾಳುಗಳನ್ನು ಕೊಂಡುಕೊಂಡೆ. ಇವರಿಗಾದ ಮಕ್ಕಳು ನನಗೆ ಹುಟ್ಟುಗುಲಾಮರಾದರು. ಇದಲ್ಲದೆ ಜೆರುಸಲೇಮಿನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ಹೆಚ್ಚು ದನಕುರಿಗಳು ನನಗಾದವು; ನಾನು ಧನವಂತನಾದೆ.೮ [8]ಬೆಳ್ಳಿಬಂಗಾರಗಳನ್ನೂ ಅರಸರ ಹಾಗೂ ಸಾಮಂತರ ಕಪ್ಪಕಾಣಿಕೆಗಳನ್ನೂ ಶೇಖರಿಸಿಕೊಂಡೆ. ಗಾಯಕಗಾಯಕಿಯರೂ ಭೋಗವಿಲಾಸಕ್ಕಾಗಿ ಹಲವಾರು ಉಪಪತ್ನಿಯರೂ ನನಗಿದ್ದರು.೯ [9]ಹೀಗೆ ಜೆರುಸಲೇಮಿನಲ್ಲಿ ಹಿಂದೆ ಇದ್ದ ಎಲ್ಲರಿಗಿಂತಲೂ ಅಭಿವೃದ್ಧಿಹೊಂದಿ ಶ್ರೀಮಂತನಾದೆ.೧೦ [10]ನನ್ನ ಕಣ್ಣು ಬಯಸಿದ್ದೆಲ್ಲವನ್ನೂ ಅದಕ್ಕೆ ಒಪ್ಪಿಸಿದೆ. ಹೃದಯ ಕೋರಿದ ಸಂತೋಷವನ್ನು ಅದಕ್ಕೆ ನಿರಾಕರಿಸಲಿಲ್ಲ. ನನ್ನ ಮನ ಎಲ್ಲಾ ಕಾರ್ಯಕಲಾಪಗಳಲ್ಲೂ ಉಲ್ಲಾಸಗೊಳ್ಳುತ್ತಿತ್ತು. ಇವೆಲ್ಲ ನನ್ನ ಪ್ರಯಾಸಕ್ಕೆ ದೊರೆತ ಫಲ.೧೧ [11]ಆಗ ನಾನೇ ಸ್ವತಃ ಮಾಡಿದ ಎಲ್ಲಾ ಕೆಲಸಕಾರ್ಯಗಳನ್ನೂ ಪಟ್ಟ ಎಲ್ಲ ಪ್ರಯಾಸವನ್ನೂ ಗಮನವಿಟ್ಟು ಪರಿಶೀಲಿಸಿದೆ. ಆದರೆ ಇಗೋ, ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ಎಲ್ಲವೂ ವ್ಯರ್ಥ; ಲೋಕದಲ್ಲಿ ಲಾಭಕರವಾದುದು ಏನೂ ಕಾಣಲಿಲ್ಲ.೧೨ [12]ರಾಜನ ಪ್ರಯತ್ನವೇ ಹೀಗಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುತ್ತದೆ ಎಂದುಕೊಂಡೆ. ಜ್ಞಾನವೆಂದರೇನು? ಮೂಢತನವೆಂದರೇನು? ಬುದ್ಧಿಹೀನತೆ ಎಂದರೇನು? ಇವುಗಳ ಬಗ್ಗೆ ಮತ್ತೆ ಚಿಂತಿಸಿದೆ.೧೩ [13]ಆಗ “ಬೆಳಕು ಕತ್ತಲೆಗಿಂತ ಶ್ರೇಷ್ಠವಾಗಿರುವಂತೆ ಜ್ಞಾನ ಮೂಢತನಕ್ಕಿಂತ ಶ್ರೇಷ್ಠ” ಎಂದು ಗೋಚರವಾಯಿತು.೧೪ [14]“ಜ್ಞಾನಿಗೆ ಹಣೆಯಲ್ಲಿ ಕಣ್ಣು, ಮೂಢನೋ ಕತ್ತಲೆಯಲ್ಲಿ ನಡೆಯುತ್ತಾನೆ\. ಆದರೆ ಇವರಿಬ್ಬರ ಗತಿ ಒಂದೇ ಎಂದು ಕಂಡುಬಂದಿತು.೧೫ [15]“ಮೂಢನಿಗೆ ಸಂಭವಿಸುವ ಗತಿ ನನಗೂ ಸಂಭವಿಸುವುದಾದರೆ ನನ್ನ ಹೆಚ್ಚಿನ ಜ್ಞಾನದಿಂದ ಪ್ರಯೋಜನವೇನು? ಇದೂ ವ್ಯರ್ಥವೇ!” ಎಂದುಕೊಂಡೆ.೧೬ [16]ಏಕೆಂದರೆ ಮೂಢನನ್ನು ಹೇಗೋ ಹಾಗೆಯೇ ಜ್ಞಾನಿಯನ್ನೂ ಜನರು ನಿರಂತರವಾಗಿ ಮರೆತುಹೋಗುವರು. ಮುಂದಿನ ಕಾಲದವರು ಈಗಿನವರನ್ನೆಲ್ಲ ಮರೆತುಬಿಡುವರು ಎಂಬುದು ನಿಶ್ಚಯ. ನಿಸ್ಸಂದೇಹವಾಗಿ ಮೂಢನಂತೆ ಜ್ಞಾನಿಯು ಮೃತನಾಗುವನು.೧೭ [17]ಲೋಕದ ಆಗುಹೋಗುಗಳು ಕೇಡಿಗೆ ಈಡಾಗುವುವೆಂದು ನನಗೆ ಕಂಡುಬಂದಿತು. ಜೀವನವೇ ನೀರಸವೆಂದು ನನಗೆ ತೋಚಿತು; ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ಸಮಸ್ತವೂ ವ್ಯರ್ಥವೇ ಸರಿ!೧೮ [18]ನನ್ನ ದುಡಿಮೆಯ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕಲ್ಲಾ ಎಂದು ಲೋಕದಲ್ಲಿ ನಾನು ಪಟ್ಟ ಪ್ರಯಾಸದ ಬಗ್ಗೆ ಬೇಸರಗೊಂಡೆ.೧೯ [19]ನನ್ನ ನಂತರ ಬರುವವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಅವನು ಎಂಥವನಾದರೂ ನಾನು ಲೋಕದಲ್ಲಿ ಬುದ್ಧಿ ಖರ್ಚುಮಾಡಿ ಗಳಿಸಿದ ದುಡಿಮೆಯ ಫಲಕ್ಕೆಲ್ಲ ಅವನು ಒಡೆಯನಾಗುತ್ತಾನೆ. ಇದು ಸಹ ವ್ಯರ್ಥವೇ.೨೦ [20]ಹೀಗಿರಲು, ನಾನು ಲೋಕದಲ್ಲಿ ಕಷ್ಟಪಟ್ಟು ಗಳಿಸಿದ ದುಡಿಮೆಯ ಬಗ್ಗೆ ನಿರಾಶೆಗೊಂಡೆ.೨೧ [21]ಒಬ್ಬನು ಜ್ಞಾನದಿಂದಲೂ ತಿಳುವಳಿಕೆ ಇಂದಲೂ ಕೆಲಸಮಾಡಿ ಕಾರ್ಯವನ್ನು ಸಿದ್ಧಿಗೆ ತಂದಮೇಲೆ, ಅದಕ್ಕಾಗಿ ಪ್ರಯಾಸಪಡದವನಿಗೆ ಅದನ್ನು ವಾರಸುದಾರನಾಗಿ ಬಿಡಬೇಕಾಗುತ್ತದೆ. ಇದು ಸಹ ವ್ಯರ್ಥವಲ್ಲವೆ? ಇದು ಅನ್ಯಾಯವಲ್ಲವೇ?೨೨ [22]ಲೋಕದಲ್ಲಿ ಮಾನವನು ಹೃತ್ಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು?೨೩ [23]ಅವನ ಮನಸ್ಸಿಗೆ ನೆಮ್ಮದಿ ಇಲ್ಲ, ಇದು ಸಹ ವ್ಯರ್ಥವೇ ಸರಿ.೨೪ [24]ತಿಂದು, ಕುಡಿದು, ತನ್ನ ದುಡಿಮೆಯಲ್ಲೇ ಸುಖವನ್ನು ಅನುಭವಿಸುವುದಕ್ಕಿಂತ ಮೇಲಾದುದು ಮನುಷ್ಯನಿಗೆ ಯಾವುದು ಇಲ್ಲ. ಇದು ದೇವರಿಂದ ಆದುದು ಎಂದು ಮನಗಂಡೆ.೨೫ [25]ದೇವರಿಲ್ಲದೆ ಯಾರಿಗೆ ಊಟ ದೊರಕೀತು? ಅವರಿಲ್ಲದೆ ಸುಖಾನುಭವ ಯಾರಿಗೆ ದೊರಕೀತು?೨೬ [26]ದೇವರು ತಾವು ಮೆಚ್ಚಿದವನಿಗೆ ಜ್ಞಾನವನ್ನೂ, ತಿಳುವಳಿಕೆಯನ್ನೂ, ಸುಖಸಂತೋಷವನ್ನೂ ದಯಪಾಲಿಸುತ್ತಾರಲ್ಲವೇ? ಪಾಪಿಗಾದರೋ, ಪ್ರಯೋಜನಕರವಾದುವುಗಳನ್ನು ಕೂಡಿಸಿಡುವ ಪ್ರಯಾಸವನ್ನು ಮಾತ್ರ ವಿಧಿಸಿದ್ದಾರೆ. ಆದರೆ ಅವು ತಮಗೆ ಮೆಚ್ಚುಗೆಯಾದವರಿಗೆ ಸೇರಬೇಕಾದವು. ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide ಕನ್ನಡ ಬೈಬಲ್ (KNCL) 2016 ಉಪದೇಷಕ ೨ 00:00:00 00:00:00 0.5x 2.0x https://beblia.bible:81/BibleAudio/kannadakncl/ecclesiastes/002.mp3 12 2