× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ KSB ೨೦೨೨IRV ೨೦೧೯BSIJV ೨೦೧೬KNCL ೨೦೧೬BSI ೨೦೧೬ERV ೨೦೦೭1 1 1 ಸಂಖ್ಯಾಕಾಂಡ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೧೮ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧೩೨೩೩೩೪೩೫೩೬1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧೩೨1 1 1 ಕನ್ನಡ ಬೈಬಲ್ (KNCL) 2016 ಸಂಖ್ಯಾಕಾಂಡ ೧೮ ಟಿಪ್ಪಣಿಗಳನ್ನು ಉಳಿಸಿ ೧ [1]ಸರ್ವೇಶ್ವರ ಸ್ವಾಮಿ ಆರೋನನಿಗೆ ಹೀಗೆಂದರು: “ದೇವದರ್ಶನದ ಗುಡಾರದ ವಿಷಯದಲ್ಲಿ ಏನಾದರು ಅಕ್ರಮ ನಡೆದರೆ ನೀನು, ನಿನ್ನ ಸಂತತಿಯವರು ಮತ್ತು ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕ ಸೇವೆಯ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನು ಮತ್ತು ನಿನ್ನ ಸಂತತಿಯವರು ಮಾತ್ರ ಆ ದೋಷದ ಫಲವನ್ನು ಅನುಭವಿಸಬೇಕು.೨ [2]ನಿನ್ನ ಕುಲದ ಮೂಲ ಪುರುಷನಾದ ಲೇವಿಯ ವಂಶದವರನ್ನು ನಿನ್ನ ಜೊತೆಯಲ್ಲಿರಿಸಿಕೊಂಡು, ನಿನ್ನ ಕೈಕೆಳಗೆ ಸೇವೆಮಾಡಿಸು. ಆದರೆ ಮಂಜೂಷವಿರುವ ಗುಡಾರದ ಮುಂದೆ ನೀನು ಮತ್ತು ನಿನ್ನ ಮಕ್ಕಳು ಮಾತ್ರ ಸೇವೆಮಾಡಬೇಕು.೩ [3]ಲೇವಿಯರು ನಿನ್ನ ಅಪ್ಪಣೆ ಮೇರೆಗೆ ನಡೆದು ಇಡೀ ಗುಡಾರವನ್ನು ಕಾಯಬೇಕು. ಆದರೆ ಪವಿತ್ರಸ್ಥಾನದ ವಸ್ತುಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಕೂಡದು; ಬಂದರೆ ಅವರು ಮಾತ್ರವಲ್ಲ ನೀವೂ ಕೂಡ ಸಾಯಬೇಕಾಗಬಹುದು.೪ [4]ಅವರು ನಿಮ್ಮ ಜೊತೆ ಸೇರಿ ದೇವದರ್ಶನದ ಗುಡಾರವನ್ನು ನೋಡಿಕೊಳ್ಳಲಿ; ಅದರ ಎಲ್ಲ ಪರಿಚರ್ಯವನ್ನು ಮಾಡಲಿ. ಇತರ ಕುಲದವರ ಜೊತೆ ನಿಮಗೆ ಬೇಡ.೫ [5]ದೇವಸ್ಥಾನದ ವ್ಯವಹಾರವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು. ಆಗ ದೇವರ ಕೋಪ ಮತ್ತೆ ಇಸ್ರಯೇಲರ ಮೇಲೆ ಬಾರದು.೬ [6]ಇಸ್ರಯೇಲರಲ್ಲಿ ನಿನ್ನ ಕುಲದವರಾದ ಲೇವಿಯರನ್ನು ನಾನೇ ಆರಿಸಿಕೊಂಡಿದ್ದೇನೆ. ಅವರು ಸರ್ವೇಶ್ವರನಿಗೆ ಸಮರ್ಪಿತವಾಗಿ ಕಾಣಿಕೆಯಂತೆ ನಿನ್ನ ವಶದಲ್ಲೇ ಇದ್ದಾರೆ. ದೇವದರ್ಶನದ ಗುಡಾರದ ಪರಿಚರ್ಯವನ್ನು ಅವರೇ ಮಾಡಲಿ.೭ [7]ನೀನು ಮತ್ತು ನಿನ್ನ ಸಂತತಿಯವರು ಯಾಜಕ ಕರ್ತವ್ಯಗಳನ್ನು ಕೈಗೊಂಡು ಬಲಿಪೀಠದ ಮತ್ತು ಗರ್ಭಗುಡಿಯ ಸೇವೆಯನ್ನು ನಡೆಸಬೇಕು. ಅವುಗಳ ಪರಿಚರ್ಯವನ್ನು ನೀವೇ ಮಾಡಬೇಕು. ಯಾಜಕ ಪದವಿಯನ್ನು ನಿಮಗೆ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈಹಾಕಬಾರದು. ಹಾಕಿದರೆ ಅಂಥವರಿಗೆ ಮರಣಶಿಕ್ಷೆಯಾಗಬೇಕು.”೮ [8]ಸರ್ವೇಶ್ವರ ಆರೋನನಿಗೆ ಹೀಗೆಂದು ಆಜ್ಞಾಪಿಸಿದರು: “ಇಸ್ರಯೇಲರು ನನಗಾಗಿ ಮೀಸಲಾಗಿಟ್ಟು ಸಮರ್ಪಿಸುವ ಪದಾರ್ಥಗಳನ್ನೆಲ್ಲ ಅಂದರೆ ಪ್ರತಿಷ್ಠಾಪಿತವಾದ ವಸ್ತುಗಳನ್ನೆಲ್ಲಾ ನಿನಗೂ ನಿನ್ನ ಸಂತತಿಯವರಿಗೂ ದಾನಮಾಡಿದ್ದೇನೆ. ಅವು ಸದಾಕಾಲ ನಿಮಗೆ ಸಲ್ಲಬೇಕಾದ ಪಾಲು.೯ [9]ಅಗ್ನಿಯಲ್ಲಿ ದಹನಮಾಡದೆ ಉಳಿಸುವ ಮಹಾಪರಿಶುದ್ಧ ಪದಾರ್ಥಗಳೆಲ್ಲ ಅಂದರೆ ಇಸ್ರಯೇಲರು ನನಗೆ ಸಮರ್ಪಿಸುವ ಎಲ್ಲ ಧಾನ್ಯ ದ್ರವ್ಯ, ನೈವೇದ್ಯ ದ್ರವ್ಯ, ಪಾಪ ಪರಿಹಾರಕ ಬಲಿ, ಪ್ರಾಯಶ್ಚಿತ್ತ ಬಲಿಕಾಣಿಕೆ, ಇವುಗಳಲ್ಲಿ ದಹನವಾಗದೆ ಉಳಿದ ಭಾಗಗಳು ಮಹಾಪರಿಶುದ್ಧವಾದುವುಗಳು. ಅವು ನಿನಗೂ ನಿನ್ನ ಸಂತತಿಯವರಿಗೂ ಸಲ್ಲತಕ್ಕವು.೧೦ [10]ಅವುಗಳಲ್ಲಿ ಅತಿ ಪವಿತ್ರವಾದುವುಗಳನ್ನು ನೀವೇ ಊಟಮಾಡಬೇಕು. ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು. ಅವು ಅತಿ ಪವಿತ್ರವಾದುವು; ಎಂಬುದನ್ನು ತಿಳಿದಿರಬೇಕು.೧೧ [11]“ಇದಲ್ಲದೆ ಇಸ್ರಯೇಲರು ನನಗೆ ಮೀಸಲಾಗಿಟ್ಟು ಅರ್ಪಿಸುವ ದ್ರವ್ಯಗಳು, ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಸಲ್ಲಬೇಕು. ಇವು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿ ಶುದ್ಧರಾದವರೆಲ್ಲರೂ ಊಟಮಾಡಬಹುದು.೧೨ [12]“ಇಸ್ರಯೇಲರು ನನಗೆ ಸಮರ್ಪಿಸುವ ಪ್ರಥಮ ಫಲಗಳು, ಅಂದರೆ ಎಣ್ಣೆ, ದ್ರಾಕ್ಷಾರಸ, ಧಾನ್ಯ, ಇವುಗಳಲ್ಲಿ ಶ್ರೇಷ್ಠವಾದುದು ನಿನಗೇ ಸಿಗಬೇಕೆಂದು ವಿಧಿಸಿದ್ದೇನೆ.೧೩ [13]ಆ ಜನರು ತಮ್ಮ ನಾಡಿನ ಎಲ್ಲ ಬೆಳೆಗಳಲ್ಲಿ ನನಗೆ ತರುವ ಪ್ರಥಮ ಫಲಗಳು ನಿನಗೇ ಸಲ್ಲಬೇಕು. ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.೧೪ [14]ಅವರು ನನಗೆ ಹರಕೆಮಾಡಿ ಅರ್ಪಿಸಿಕೊಡುವ ಪ್ರತಿಯೊಂದು ನಿನಗೆ ದಕ್ಕಬೇಕು.೧೫ [15]“ಮನುಷ್ಯರಲ್ಲೇ ಆಗಲಿ, ಪಶುಗಳಲ್ಲೇ ಆಗಲಿ, ಅವರು ನನಗೆ ಸಮರ್ಪಿಸುವ ಸಕಲ ಪ್ರಾಣಿಗಳಲ್ಲಿ ಚೊಚ್ಚಲಿನದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.೧೬ [16]ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗಲೆ ಗೊತ್ತಾದ ಈಡನ್ನು ಅಂದರೆ ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡು.೧೭ [17]ಹಸುವಿನ ಮತ್ತು ಆಡುಕುರಿಗಳ ಚೊಚ್ಚಲು ಮರಿಗಳನ್ನು ಬಿಡಕೂಡದು. ಅವು ದೇವರ ಸೊತ್ತು. ಆದ್ದರಿಂದ ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸು; ಅವುಗಳ ಕೊಬ್ಬನ್ನು ಬಲಿಕಾಣಿಕೆಯಾಗಿ ದಹಿಸು.೧೮ [18]ಅವುಗಳ ಮಾಂಸ ಹಾಗೂ ನೈವೇದ್ಯವಾಗಿ ಆರತಿಯೆತ್ತುವ ಎದೆ ಮತ್ತು ಬಲತೊಡೆ ನಿನಗೆ ಸಲ್ಲಬೇಕು.೧೯ [19]“ಇಸ್ರಯೇಲರು ನನಗೆ ಮೀಸಲಾಗಿಟ್ಟು ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲಾ ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರಿಗೂ ಸಲ್ಲಬೇಕು. ಸದಾಕಾಲಕ್ಕೂ ಇದನ್ನು ನಾನು ನಿನಗೆ ಅನುಗ್ರಹಿಸಿದ್ದೇನೆ. ಇದು ನನ್ನ ಸನ್ನಿಧಿಯಲ್ಲಿ ನಿನ್ನೊಡನೆ ಮತ್ತು ನಿನ್ನ ಸಂತತಿಯೊಡನೆ ಮಾಡಿಕೊಂಡ ಶಾಶ್ವತವಾದ ಉಪ್ಪಿನ ಒಡಂಬಡಿಕೆ.”೨೦ [20]ಇದಲ್ಲದೆ ಸರ್ವೇಶ್ವರ ಆರೋನನಿಗೆ ಹೀಗೆಂದರು: “ಇಸ್ರಯೇಲರ ನಾಡಿನಲ್ಲಿ ನಿನ್ನ ಸ್ವಂತ ಸೊತ್ತಾಗಿ ಯಾವ ಆಸ್ತಿಯೂ ಇರುವುದಿಲ್ಲ; ಅವರೊಂದಿಗೆ ನಿನಗೆ ಯಾವ ಪಾಲೂ ಇರುವುದಿಲ್ಲ. ಇಸ್ರಯೇಲರ ನಡುವೆ ನಾನೇ ನಿನಗೆ ಆಸ್ತಿಪಾಸ್ತಿ, ಪಾಲುಪಸುಗೆ.”೨೧ [21]“ಇಗೋ, ಇಸ್ರಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಲೇವಿಯರಿಗೆ ಕೊಟ್ಟಿದ್ದೇನೆ. ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡುವ ಅವರಿಗೆ ಇದು ಸಲ್ಲತಕ್ಕ ಸಂಭಾವನೆ.೨೨ [22]ಇನ್ನು ಮುಂದೆ ಇಸ್ರಯೇಲರು ಪಾಪಮಾಡಿ ಸಾವಿಗೆ ತುತ್ತಾಗದಂತೆ ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಕೂಡದು.೨೩ [23]ಆ ಗುಡಾರದ ಪರಿಚರ್ಯವನ್ನು ಮಾಡಬೇಕಾದವರು ಲೇವಿಯರೇ. ಅದರ ಸಂಬಂಧವಾಗಿ ಅವರು ಮಾಡುವ ಪಾಪದ ಫಲವನ್ನು ಅವರೇ ಅನುಭವಿಸಲಿ. ಇದು ನಿಮಗೂ ನಿಮ್ಮ ಸಂತತಿಯವರಿಗೂ ಒಂದು ಶಾಶ್ವತವಾದ ನಿಯಮವಾಗಿರಲಿ. ಲೇವಿಯರಿಗೆ ಇಸ್ರಯೇಲರಲ್ಲಿ ಶಾಶ್ವತ ಸೊತ್ತು ಇರುವುದಿಲ್ಲ.೨೪ [24]ಇಸ್ರಯೇಲರು ನನಗೆ ಮೀಸಲಾಗಿಟ್ಟು ಸಮರ್ಪಿಸುವ ಹತ್ತನೆಯ ಪಾಲನ್ನು ಅವರಿಗೆ ಸೊತ್ತಾಗಿ ಕೊಟ್ಟಿದ್ದೇನೆ. ಆದುದರಿಂದಲೇ ಇತರ ಇಸ್ರಯೇಲರಿಗೆ ಪಾಲು ದೊರಕುವಂತೆ ಅವರಿಗೆ ಪಾಲು ದೊರಕುವುದಿಲ್ಲವೆಂದು ಒತ್ತಿಹೇಳಿದ್ದೇನೆ.”೨೫ [25]ಸರ್ವೇಶ್ವರ ಮೋಶೆಗೆ ಹೀಗೆಂದರು:೨೬ [26]“ಲೇವಿಯರಿಗೆ ನೀನು ಇಂತೆಂದು ಆಜ್ಞಾಪಿಸು - ‘ನಿಮ್ಮ ಸ್ವಂತಕ್ಕಾಗಿ ನಾನು ಗೊತ್ತುಮಾಡಿರುವ ಹತ್ತನೆಯ ಒಂದು ಪಾಲನ್ನು ಇಸ್ರಯೇಲರಿಂದ ನೀವು ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯ ಒಂದು ಪಾಲನ್ನು ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸಮರ್ಪಿಸಬೇಕು.೨೭ [27]ಹೀಗೆ ನೀವು ಸಮರ್ಪಿಸುವ ಹತ್ತನೆಯ ಪಾಲು, ಕಣದಲ್ಲಿನ ದವಸದಿಂದ ಹಾಗೂ ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಾಂಶವೆಂದು ಪರಿಗಣಿತವಾಗುವುದು.೨೮ [28]ಇಸ್ರಯೇಲರಿಂದ ನಿಮಗೆ ಸಲ್ಲುವ ಹತ್ತನೆಯ ಒಂದು ಪಾಲಿನಲ್ಲಿ ನೀವು ಸರ್ವೇಶ್ವರನಿಗೆ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯಾಜಕ ಆರೋನನಿಗೆ ಒಪ್ಪಿಸಬೇಕು.೨೯ [29]ನಿಮಗೆ ಕೊಡಲಾಗುವ ಸಕಲ ಪದಾರ್ಥಗಳಲ್ಲಿ ಉತ್ತಮ ಭಾಗವನ್ನೇ, ಅಂದರೆ ದೇವರ ವಸ್ತುವಾಗುವುದಕ್ಕೆ ಯೋಗ್ಯವಾದ ಭಾಗವನ್ನೇ ಸರ್ವೇಶ್ವರನಿಗೆ ಮೀಸಲಾಗಿಟ್ಟು ಸಮರ್ಪಿಸಬೇಕು.೩೦ [30]“ಲೇವಿಯರಿಗೆ ಮತ್ತೆ ಹೀಗೆಂದು ತಿಳಿಸು: “ನಿಮಗೆ ದೊರಕಿದ್ದರಲ್ಲಿ ಉತ್ತಮವಾದುದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ಮಿಕ್ಕದ್ದನ್ನು ಕಣದಲ್ಲಿನ ದವಸ ಹಾಗೂ ದ್ರಾಕ್ಷಿತೊಟ್ಟಿಯ ರಸವೆಂದು ಭಾವಿಸಿ ನೀವು ಉಪಯೋಗಿಸಿಕೊಳ್ಳಬಹುದು.೩೧ [31]ನೀವು ಮತ್ತು ನಿಮ್ಮ ಮನೆಯವರು ಅದನ್ನು ಯಾವ ಸ್ಥಳದಲ್ಲಿಯಾದರೂ ಊಟಮಾಡಬಹುದು. ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ಪ್ರತಿಫಲ.೩೨ [32]ಅದರಲ್ಲಿ ಉತ್ತಮಭಾಗವನ್ನು ಸರ್ವೇಶ್ವರನಿಗೆ ಮೀಸಲಾಗಿಟ್ಟ ನಂತರ ಮಿಕ್ಕದ್ದನ್ನು ಊಟಮಾಡುವುದರಿಂದ ಯಾವ ದೋಷಕ್ಕೂ ನೀವು ಗುರಿಯಾಗುವುದಿಲ್ಲ. ಇಸ್ರಯೇಲರು ಸಮರ್ಪಿಸುವ ಪವಿತ್ರ ವಸ್ತುಗಳನ್ನು ಅಪವಿತ್ರಗೊಳಿಸಬೇಡಿ; ಇಲ್ಲವಾದರೆ ಸಾಯುವಿರಿ.”Kannada Bible (KNCL) 2016 No Data ಕನ್ನಡ ಬೈಬಲ್ (KNCL) 2016 ಸಂಖ್ಯಾಕಾಂಡ ೧೮ 00:00:00 00:00:00 0.5x 2.0x https://beblia.bible:81/BibleAudio/kannadakncl/numbers/018.mp3 36 18