× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ Bosnian Kabardian ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ Tibetian ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು Aceh Balinese Bugis Pampanga Sasak Shan Waray ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ Adilabad Gondi Ahirani ಬಲೂಚಿ Bundeli Chhattisgarhi Garhwali Kangri Kumaoni Mewari Munda Sadri Seraiki Shekhawati Sylheti Bagri Bhilali Bodo Braj Tulu ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ Mazanderani ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ Bemba Fon Hadiyya Ibibio Kimbundu Kimiiru Lango Liberian Kreyol Lomwe Mende Morisyen Ndau Nyankole Sena Sidamo Soga Songe Sukuma Tarifit Teso Tiv Zande Dagbani Edo Kituba ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ [2016] ಕನ್ನಡ ಸಮಕಾಲಿಕ ೨೦೨೨ [2022]ಇಂಡಿಯನ್ ರಿವೈಜ್ಡ್ ೨೦೧೯ [2019]ಕನ್ನಡ ಸತ್ಯವೇದವು ೨೦೧೬ [2016]KNCL ೨೦೧೬ [2016]BSI ೨೦೧೬ [2016]ಪರಿಶುದ್ದ ಬೈಬಲ್ ೧೯೯೭ [1997]1 1 1 ಸಂಖ್ಯಾಕಾಂಡ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೬ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭೨೮೨೯೩೦೩೧೩೨೩೩೩೪೩೫೩೬1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬೨೭1 1 1 ಕನ್ನಡ ಬೈಬಲ್ (KNCL) 2016 ಸಂಖ್ಯಾಕಾಂಡ ೬ ಟಿಪ್ಪಣಿಗಳನ್ನು ಉಳಿಸಿ ೧ [1]ಸರ್ವೇಶ್ವರ ಸ್ವಾಮಿ, ಮೋಶೆಗೆ ಹೀಗೆಂದರು:೨ [2]“ನೀನು ಇಸ್ರಯೇಲರಿಗೆ ಆಜ್ಞಾಪಿಸಬೇಕಾದುದು ಇದು - ಯಾವ ಗಂಡಸೇ ಆಗಲಿ, ಹೆಂಗಸೇ ಆಗಲಿ ನಾಜೀರರ ವ್ರತವನ್ನು ಅಂದರೆ ಸರ್ವೇಶ್ವರನಿಗೆ ತನ್ನನ್ನೇ ಪ್ರತಿಷ್ಠಿಸಿಕೊಳ್ಳುವ ವಿಶೇಷ ವ್ರತವನ್ನು ಕೈಗೊಂಡಾಗ೩ [3]ದ್ರಾಕ್ಷಾರಸವನ್ನು ಹಾಗೂ ಮದ್ಯಪಾನವನ್ನು ಮುಟ್ಟಬಾರದು; ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯದ ಹುಳಿಯನ್ನಾಗಲಿ ಕುಡಿಯಬಾರದು. ದ್ರಾಕ್ಷಿಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು; ಹಸಿ ಅಥವಾ ಒಣಗಿದ ದ್ರಾಕ್ಷಿಹಣ್ಣನ್ನು ತಿನ್ನಬಾರದು.೪ [4]ಅಂಥವನು ವ್ರತ ಕೈಗೊಂಡು ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ದ್ರಾಕ್ಷಾಬಳ್ಳಿಯಿಂದ ಉತ್ಪನ್ನವಾದ ಹೀಚನ್ನಾಗಲಿ, ಸಿಪ್ಪೆಯನ್ನಾಗಲಿ ತಿನ್ನಬಾರದು.೫ [5]ಅವನು ತನ್ನ ವ್ರತ ದಿನಗಳಲ್ಲೆಲ್ಲಾ ಕ್ಷೌರ ಮಾಡಿಸಿಕೊಳ್ಳಬಾರದು. ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ವ್ರತಬದ್ಧನಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬೆಳೆಯಬಿಡಬೇಕು.೬ [6]ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ಯಾವ ಶವವನ್ನು ಮುಟ್ಟಬಾರದು.೭ [7]ತಾಯಿತಂದೆ, ಅಣ್ಣತಮ್ಮ, ಅಕ್ಕತಂಗಿ ಇವರಲ್ಲಿ ಯಾರು ಸತ್ತರೂ ಅವರ ನಿಮಿತ್ತ ಕೈಗೊಂಡ ವ್ರತ ಅವನ ತಲೆಯ ಮೇಲಿದೆ;೮ [8]ತಾನು ಪ್ರತಿಸ್ಠಿಸಿಕೊಂಡಿರುವ ದಿನಗಳಲ್ಲೆಲ್ಲಾ ಅವನು ಸರ್ವೇಶ್ವರನಿಗೆ ಮೀಸಲಾಗಿಯೇ ಇರಬೇಕು.೯ [9]ಆಕಸ್ಮಿಕವಾಗಿ ಯಾರಾದರೂ ಅವನ ಬಳಿಯಲ್ಲೇ ಸತ್ತು, ಅವನು ಪ್ರತಿಷ್ಠಿಸಿಕೊಂಡಿದ್ದ ತಲೆಕೂದಲು ಅಪವಿತ್ರವಾದರೆ ಏಳನೆಯ ದಿನದಂದು ಅಂದರೆ ಶುದ್ಧೀಕರಣ ದಿನದಂದು ತಲೆಯನ್ನು ಕ್ಷೌರಮಾಡಿಸಿಕೊಳ್ಳಬೇಕು.೧೦ [10]ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಕೊಡಬೇಕು.೧೧ [11]ಯಾಜಕನು ದೋಷಪರಿಹಾರ ಬಲಿಯನ್ನಾಗಿ ಒಂದನ್ನೂ ಸಂಪೂರ್ಣ ದಹನ ಬಲಿಯನ್ನಾಗಿ ಇನ್ನೊಂದನ್ನೂ ಸಮರ್ಪಿಸಲಿ. ಹೀಗೆ ಶವಸೋಂಕಿದವನಿಗಾಗಿ ದೋಷಪರಿಹಾರಮಾಡಿ ಅವನ ತಲೆಗೂದಲು ಅಂದಿನಿಂದ ಪವಿತ್ರವೆಂದು ನಿರ್ಣಯಿಸಲಿ.೧೨ [12]ಅವನು ಎಷ್ಠು ದಿನಗಳವರೆಗೆ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದನೋ ಅಷ್ಟು ದಿನಗಳವರೆಗೆ ಹೊಸದಾಗಿ ತನ್ನನ್ನು ಸರ್ವೇಶ್ವರನಿಗೆ ಪ್ರತಿಷ್ಠಿಸಿಕೊಳ್ಳಬೇಕು. ಅದಲ್ಲದೆ ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಯನ್ನು ಸಮರ್ಪಿಸಬೇಕು. ಮೊದಲು ಮಾಡಿದ್ದ ವ್ರತಕ್ಕೆ ವಿಘ್ನಪ್ರಾಪ್ತವಾದ್ದರಿಂದ ಕಳೆದುಹೋದ ದಿನಗಳು ವ್ಯರ್ಥವಾದುವೆಂದು ಪರಿಗಣಿಸಬೇಕು.೧೩ [13]ನಾಜೀರ ವ್ರತಸ್ಥನು ತನ್ನ ವ್ರತಾವಧಿ ಮುಗಿದಾಗ ಈ ಕ್ರಮವನ್ನು ಅನುಸರಿಸಬೇಕು. ಅವನು ದೇವದರ್ಶನದ ಗುಡಾರದ ಬಾಗಿಲಿಗೆ ಬಂದು ಸರ್ವೇಶ್ವರನಿಗೆ ಈ ಕಾಣಿಕೆಗಳನ್ನು ಸಲ್ಲಿಸಬೇಕು;೧೪ [14]ದಹನಬಲಿಗಾಗಿ ಕಳಂಕರಹಿತವಾದ ಒಂದು ವರ್ಷದ ಟಗರು, ಪಾಪಪರಿಹಾರ ಬಲಿಗಾಗಿ ಕಳಂಕರಹಿತವಾದ ಒಂದು ವರ್ಷದ ಕುರಿ, ಸಮಾಧಾನ ಬಲಿಗಾಗಿ ಕಳಂಕರಹಿತವಾದ ಒಂದು ಟಗರು.೧೫ [15]ಇದಲ್ಲದೆ ಒಂದು ಬುಟ್ಟಿ ತುಂಬ ಎಣ್ಣೆಬೆರಸಿದ ಗೋದಿಹಿಟ್ಟಿನ ಹುಳಿಯಿಲ್ಲದ ರೊಟ್ಟಿಗಳು, ಎಣ್ಣೆಹಾಕಿದ ಹುಳಿಯಿಲ್ಲದ ಕಡಬುಗಳು ಮತ್ತು ಮೇಲೆ ಹೇಳಿದ ಬಲಿಗಳ ಸಮೇತ ಕೊಡಬೇಕಾದ ಧಾನ್ಯದ್ರವ್ಯ-ಪಾನದ್ರವ್ಯಗಳು, ಇವುಗಳನ್ನೆಲ್ಲಾ ಸಮರ್ಪಿಸಬೇಕು.೧೬ [16]ಯಾಜಕನು ಇವುಗಳನ್ನು ಸರ್ವೇಶ್ವರನ ಸನ್ನಿಧಿಗೆ ತಂದು ನಾಜೀರ ವ್ರತ ಪಾಪಪರಿಹಾರಕ ಬಲಿಯನ್ನೂ ದಹನಬಲಿಯನ್ನೂ ಸಮರ್ಪಿಸಬೇಕು.೧೭ [17]ಅನಂತರ ಟಗರನ್ನೂ ಬುಟ್ಟಿ ತುಂಬಿರುವ ಹುಳಿಯಿಲ್ಲದ ರೊಟ್ಟಿಗಳನ್ನೂ ಸರ್ವೇಶ್ವರನಿಗೆ ಸಮಾಧಾನ ಯಜ್ಞವಾಗಿ ಸಮರ್ಪಿಸಬೇಕು. ತಂದ ಧಾನ್ಯದ್ರವ್ಯ - ಪಾನದ್ರವ್ಯಗಳನ್ನು ಯಾಜಕನು ನೈವೇದ್ಯ ಮಾಡಬೇಕು.೧೮ [18]ಬಳಿಕ ನಾಜೀರ ವ್ರತಸ್ಥನು ತನ್ನ ದೀಕ್ಷೆಯನ್ನು ಸೂಚಿಸುವ ತಲೆಯ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಳ್ಳಬೇಕು. ಆ ಕೂದಲನ್ನು ಸಮಾಧಾನ ಬಲಿಯ ದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.೧೯ [19]ತರುವಾಯ ಯಾಜಕನು ಆ ಟಗರಿನ ಬೆಂದ ಮುಂದೊಡೆಯನ್ನು ಬುಟ್ಟಿಯಲ್ಲಿನ ಹುಳಿಯಿಲ್ಲದ ಒಂದು ರೊಟ್ಟಿಯನ್ನು ಹಾಗೂ ಹುಳಿಯಿಲ್ಲದ ಒಂದು ಕಡುಬನ್ನು ತೆಗೆದುಕೊಂಡು ನಾಜೀರ ವ್ರತಸ್ಥನು ಕ್ಷೌರಮಾಡಿಸಿಕೊಂಡ ನಂತರ ಅವನ ಕೈಯಲ್ಲಿ ಇಡಬೇಕು; ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿ ಎತ್ತಬೇಕು.೨೦ [20]ಇದು ನೈವೇದ್ಯವಾಗಿ ಆರತಿಯೆತ್ತುವ ಎದೆಯ ಭಾಗದಂತೆ ಹಾಗೂ ಯಾಜಕರಿಗಾಗಿ ಪ್ರತ್ಯೇಕಿಸುವ ತೊಡೆಯಂತೆ ಯಾಜಕನಿಗೆ ಸಲ್ಲಬೇಕು. ಇದಾದ ನಂತರ ನಾಜೀರ ವ್ರತಸ್ಥನು ದ್ರಾಕ್ಷಾರಸವನ್ನು ಪಾನಮಾಡಬಹುದು.೨೧ [21]ಇದುವೇ ನಾಜೀರ ವ್ರತಸ್ಥರು ಅನುಸರಿಸಬೇಕಾದ ವಿಧಿ. ತಮ್ಮ ವ್ರತಪೂರ್ತಿಗಾಗಿ ಸರ್ವೇಶ್ವರನಿಗೆ ಅವರು ಸಮರ್ಪಿಸಬೇಕಾದ ಕಾಣಿಕೆ. ಅವರು ತಮ್ಮ ಶಕ್ತಿಗನುಸಾರ ಹೆಚ್ಚಾಗಿಯೂ ಕೊಡಬಹುದು. ಆದರೆ ತಾವು ಕೊಡುತ್ತೇವೆಂದು ಹರಕೆ ಮಾಡಿದಷ್ಟನ್ನು ವ್ರತ ವಿಧಿಗನುಸಾರ ಕೊಡಲೇಬೇಕು.೨೨ [22]ಸರ್ವೇಶ್ವರ ಮೋಶೆಗೆ ಹೀಗೆಂದರು:೨೩ [23]”ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು: ‘ನೀವು ಇಸ್ರಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಹೇಳಬೇಕು -೨೪ [24]ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ!೨೫ [25]ಸರ್ವೇಶ್ವರ ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ ನಿಮಗೆ ದಯೆ ತೋರಲಿ!೨೬ [26]ಸರ್ವೇಶ್ವರ ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ!೨೭ [27]ಹೀಗೆ ಅವರು ಇಸ್ರಯೇಲರ ಮೇಲೆ ನನ್ನ ಹೆಸರನ್ನು ಉಚ್ಛರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.”Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide ಕನ್ನಡ ಬೈಬಲ್ (KNCL) 2016 ಸಂಖ್ಯಾಕಾಂಡ ೬ 00:00:00 00:00:00 0.5x 2.0x https://beblia.bible:81/BibleAudio/kannadakncl/numbers/006.mp3 36 6