× ಭಾಷೆ ಯುರೋಪ್ ರಷ್ಯನ್ ಬೆಲರೂಸಿಯನ್ ಉಕ್ರೇನಿಯನ್ ಪೋಲಿಷ್ ಸರ್ಬಿಯನ್ ಬಲ್ಗೇರಿಯನ್ ಸ್ಲೋವಾಕಿಯನ್ ಜೆಕ್ ರೊಮೇನಿಯನ್ ಮೊಲ್ಡೋವಿಯನ್ ಅಜೆರ್ಬೈಜಾನ್ ಅರ್ಮೇನಿಯನ್ ಜಾರ್ಜಿಯನ್ ಅಲ್ಬೇನಿಯನ್ ಅವರ್ ಬಾಷ್ಕೀರ್ ಟಾಟರ್ ಚೆಚೆನ್ ಸ್ಲೋವೇನಿಯನ್ ಕ್ರೊಯೇಷಿಯನ್ ಎಸ್ಟೋನಿಯನ್ ಲಟ್ವಿಯನ್ ಲಿಥುವೇನಿಯನ್ ಹಂಗೇರಿಯನ್ ಫಿನ್ನಿಶ್ ನಾರ್ವೇಜಿಯನ್ ಸ್ವೀಡಿಷ್ ಐಸ್ಲ್ಯಾಂಡಿಕ್ ಗ್ರೀಕ್ ಮೆಸಿಡೋನಿಯನ್ ಜರ್ಮನ್ ಬವೇರಿಯನ್ ಡಚ್ ಡ್ಯಾನಿಶ್ ವೆಲ್ಷ್ ಗೇಲಿಕ್ ಐರಿಶ್ ಫ್ರೆಂಚ್ ಬಾಸ್ಕ್ ಕೆಟಲಾನ್ ಇಟಾಲಿಯನ್ ಗೆಲಾಸಿಯನ್ ರೋಮಾನಿ Bosnian Kabardian ಉತ್ತರ ಅಮೆರಿಕ ಇಂಗ್ಲಿಷ್ ದಕ್ಷಿಣ ಅಮೇರಿಕ ಸ್ಪ್ಯಾನಿಶ್ ಪೋರ್ಚುಗೀಸ್ ಗೌರಾನಿ ಕ್ವಿಚುವಾನ್ ಅಯ್ಮಾರಾ ಮಧ್ಯ ಅಮೇರಿಕಾ ಜಮೈಕಾದ ನಹುವಲ್ ಕೀಚಿ ಕ್ಯೆಕ್ಚಿ ಹೈಟಿ ಪೂರ್ವ ಏಷ್ಯಾ ಚೀನೀ ಜಪಾನೀಸ್ ಕೊರಿಯನ್ ಮಂಗೋಲಿಯನ್ ಉಯಿಘರ್ ಮಾಂಗ್ Tibetian ಆಗ್ನೇಯ ಏಷ್ಯಾ ಮಲೇಷಿಯನ್ ಬರ್ಮೀಸ್ ಗದ್ದ ನೇಪಾಳಿ ಸೆಬುವಾನೋ ಟ್ಯಾಗಲಾಗ್ ಕಾಂಬೋಡಿಯನ್ ಥಾಯ್ ಇಂಡೋನೇಷಿಯನ್ ವಿಯೆಟ್ನಾಮೀಸ್ ಜಾವಾನೀಸ್ ಲಾವೋ ಇಬಾನ್ ಐಯು ಮಿಯೆನ್ ಕಚಿನ್ ಲಾಹು Aceh Balinese Bugis Pampanga Sasak Shan Waray ದಕ್ಷಿಣ ಏಷ್ಯಾ ಹಿಂದಿ ಒಡಿಯಾ ಅವಧಿ ಮಿಜೊ ಕನ್ನಡ ಮಲಯಾಳಂ ಮರಾಠಿ ಗುಜರಾತಿ ತಮಿಳು ತೆಲುಗು ಪಂಜಾಬಿ ಕುರುಖ್ ಅಸ್ಸಾಮೀಸ್ ಮೈಥಿಲಿ ಬೆಂಗಾಲಿ ಉರ್ದು ಸಿಂಹಳ ಡೋಗ್ರಿ ಹರ್ಯಾನ್ವಿ ಮೈತೇಯಿ ಕೊಂಕಣಿ ಸಂತಾಲಿ ಸಿಂಧಿ ಕೋಯಾ ಥಾಡೋ ಸಂಸ್ಕೃತ ದೇವನಾಗರಿ Adilabad Gondi Ahirani ಬಲೂಚಿ Bundeli Chhattisgarhi Garhwali Kangri Kumaoni Mewari Munda Sadri Seraiki Shekhawati Sylheti Bagri Bhilali Bodo Braj Tulu ಮಧ್ಯ ಏಷ್ಯಾ ಕಿರ್ಗಿಜ್ ಉಜ್ಬೆಕ್ ತಾಜಿಕ್ ತುರ್ಕಮೆನ್ ಕಝಾಕಿಸ್ತಾನ್ ಕಾರಕಲ್ಪಕ್ ಮಧ್ಯ ಪೂರ್ವ ಟರ್ಕಿಶ್ ಹೀಬ್ರೂ ಅರೇಬಿಕ್ ಪರ್ಷಿಯನ್ ಕುರ್ದಿಶ್ Mazanderani ಪಾಷ್ಟೋ ಕಾಪ್ಟಿಕ್ ಆಫ್ರಿಕಾ ಆಫ್ರಿಕಾನ್ಸ್ ಷೋಸಾ ಜುಲು ಎನ್ಡೆಬೆಲೆ ಸೋಥೋ ಅಂಹರಿಕ್ ವಲಾಯಟ್ಟಾ ನೈಜೀರಿಯನ್ ಮೊಸ್ಸಿ ಇಕಾ ಡಿಂಕಾ ಕಬೈಲ್ ಎವ್ ಸ್ವಾಹಿಲಿ ಮೊರಾಕೊ ಸೊಮಾಲಿಯನ್ ಶೋನಾ ಮಡಗಾಸ್ಕರ್ ಇಗ್ಬೊ ಲಿಂಗಲ ಬೌಲೆ ಸಿಸ್ವತಿ ಸೋಂಗಾ ತ್ವಾನಾ ಗ್ಯಾಂಬಿಯಾ ಯೊರುಬಾ ಕಂಬಾ ಕಿನ್ಯಾರ್ವಾಂಡಾ ಹೌಸಾ ಚೆವಾ ಲುವೋ ಮಕುವಾ ಡ್ಯುಲಾ ಫುಲ್ಫುಲ್ಡೆ ಕಲೆಂಜಿನ್ ಕಿಕುಯು ಕಿಕ್ವಾಂಗೋ ಕಿರುಂಡಿ ಕ್ರಿಯೋ ನೈಜೀರಿಯನ್ ಪಿಡ್ಜಿನ್ ಒರೊಮೊ ಟಿಶಿಲುಬಾ ತ್ಶಿವೆಂದಾ ಟ್ವಿ ಉಂಬುಂಡು ಲುಗ್ಬಾರಾ ಲುಗುರು ಪ್ಯುಲರ್ ಗುಸ್ಸಿ ಮಾಸಾಯಿ ತುರ್ಕಾನಾ ಮೊಬಾ ನ್ಯೂಯರ್ ಶಿಲುಕ್ ತಮಾಷೆಕ್ ಮಕೊಂಡೆ Bemba Fon Hadiyya Ibibio Kimbundu Kimiiru Lango Liberian Kreyol Lomwe Mende Morisyen Ndau Nyankole Sena Sidamo Soga Songe Sukuma Tarifit Teso Tiv Zande Dagbani Edo Kituba ಆಸ್ಟ್ರೇಲಿಯಾ ಖಂಡ ನ್ಯೂಜಿಲ್ಯಾಂಡ್ ಪಪುವಾ ನ್ಯೂ ಗಿನಿಯಾ ಹಳೆಯ ಭಾಷೆಗಳು ಅರಾಮಿಕ್ ಲ್ಯಾಟಿನ್ ಎಸ್ಪೆರಾಂಟೊ 1 1 1 KNCL ೨೦೧೬ [2016] ಕನ್ನಡ ಸಮಕಾಲಿಕ ೨೦೨೨ [2022]ಇಂಡಿಯನ್ ರಿವೈಜ್ಡ್ ೨೦೧೯ [2019]ಕನ್ನಡ ಸತ್ಯವೇದವು ೨೦೧೬ [2016]KNCL ೨೦೧೬ [2016]BSI ೨೦೧೬ [2016]ಪರಿಶುದ್ದ ಬೈಬಲ್ ೧೯೯೭ [1997]1 1 1 ಯೊಹೋಶುವ ಆದಿಕಾಂಡವಿಮೋಚನಾಕಾಂಡಯಾಜಕಕಾಂಡಸಂಖ್ಯಾಕಾಂಡಧರ್ಮೋಪದೇಷಕಾಂಡಯೊಹೋಶುವನ್ಯಾಯಸ್ಥಾಪಕರುರೂತಳುಸಮುವೇಲನು ೧ಸಮುವೇಲನು ೨ಅರಸುಗಳು ೧ಅರಸುಗಳು ೨ಕ್ರಾನಿಕಲ್ಸ್ ೧ಕ್ರಾನಿಕಲ್ಸ್ ೨ಎಜ್ರನುನೆಹೆಮೀಯಾಎಸ್ತೆರಳುಯೋಬನಕೀರ್ತನೆಗಳುಜ್ಞಾನೋಕ್ತಿಗಳುಉಪದೇಷಕಪರಮಗೀತೆಯೆಶಾಯನಯೆರೆಮೀಯನ ಗ್ರಂಥಪ್ರಲಾಪಗಳುಯೆಜೆಕಿಯೇಲನದಾನಿಯೇಲನಹೊಶೇಯನಯೊವೇಲನಆಮೋಸನಓಬದ್ಯನಯೋನನಮೀಕನನಹೂಮನಹಬಕ್ಕೂಕನಜೆಫನ್ಯನಹಗ್ಗಾಯನಜೆಕರ್ಯನಮಲಾಕಿಯನ--- --- ---ಮತ್ತಾಯನುಮಾರ್ಕನುಲೂಕನುಯೊವಾನ್ನನುಪ್ರೇಷಿತರರೋಮನರಿಗೆಕೊರಿಂಥಿಯರಿಗೆ ೧ಕೊರಿಂಥಿಯರಿಗೆ ೨ಗಲಾತ್ಯರಿಗೆಎಫೆಸಿಯರಿಗೆಫಿಲಿಪಿಯರಿಗೆಕೊಲೊಸ್ಸೆಯರಿಗೆಥೆಸೆಲೋನಿಯರಿಗೆ ೧ಥೆಸೆಲೋನಿಯರಿಗೆ ೨ತಿಮೊಥೇಯನಿಗ ೧ತಿಮೊಥೇಯನಿಗ ೨ತೀತನಿಗೆಫಿಲೆಮೋನನಿಗೆಹಿಬ್ರಿಯರಿಗೆಯಕೋಬನುಪೇತ್ರನು ೧ಪೇತ್ರನು ೨ಯೊವಾನ್ನನು ೧ಯೊವಾನ್ನನು ೨ಯೊವಾನ್ನನು ಮೂರುಯೂದನುಪ್ರಕಟನೆ1 1 1 ೧೮ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪1 1 1 : ೧ ೧೨೩೪೫೬೭೮೯೧೦೧೧೧೨೧೩೧೪೧೫೧೬೧೭೧೮೧೯೨೦೨೧೨೨೨೩೨೪೨೫೨೬1 1 1 ಕನ್ನಡ ಬೈಬಲ್ (KNCL) 2016 ಯೊಹೋಶುವ ೧೮ ಟಿಪ್ಪಣಿಗಳನ್ನು ಉಳಿಸಿ ೧ [1]ನಾಡೆಲ್ಲವು ತಮ್ಮ ವಶವಾದ ಮೇಲೆ ಇಸ್ರಯೇಲ್ ಜನಾಂಗವೆಲ್ಲ ಶೀಲೋವಿನಲ್ಲಿ ಕೂಡಿ ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.೨ [2]ಇಸ್ರಯೇಲರಲ್ಲಿ ಇನ್ನೂ ಏಳು ಕುಲಗಳಿಗೆ ಪಾಲು ಸಿಕ್ಕಿರಲಿಲ್ಲ.೩ [3]ಆದುದರಿಂದ ಯೆಹೋಶುವ ಅವರಿಗೆ, “ನಿಮ್ಮ ಪೂರ್ವಜರ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟ ನಾಡನ್ನು ಸ್ವಾಧೀನ ಮಾಡಿಕೊಳ್ಳಲು ಇನ್ನೆಷ್ಟು ತಡ ಮಾಡುತ್ತಿರುವಿರಿ?೪ [4]ಪ್ರತಿಯೊಂದು ಕುಲದಿಂದ ಮೂರುಮೂರು ಮಂದಿಯನ್ನು ನೇಮಿಸಿರಿ. ನಾನು ಅವರನ್ನು ಕಳುಹಿಸುವೆನು. ಅವರು ಹೋಗಿ ನಾಡಿನಲ್ಲೆಲ್ಲಾ ಸಂಚಾರಮಾಡಿ ತಮ್ಮ ತಮ್ಮ ಕುಲಗಳಿಗನುಸಾರ ಎಲ್ಲಾ ಪ್ರದೇಶಗಳ ಪಟ್ಟಿಯನ್ನು ಬರೆದುಕೊಂಡು ನನ್ನ ಬಳಿಗೆ ಬರಲಿ.೫ [5]ತರುವಾಯ ಅವರು ಏಳು ಪಾಲುಗಳನ್ನು ಮಾಡಿ ತಮ್ಮ ತಮ್ಮೊಳಗೆ ಹಂಚಿಕೊಳ್ಳಲಿ. ದಕ್ಷಿಣದಲ್ಲಿ ಯೆಹೂದ ಕುಲದವರಿಗೆ ಉತ್ತರದಲ್ಲಿ ಜೋಸೆಫನ ಕುಲದವರಿಗೆ ಸೊತ್ತು ಸಿಕ್ಕಿದೆ. ಅದು ಅವರಿಗೇ ಇರಲಿ.೬ [6]ನೀವು ನಾಡನ್ನು ಏಳು ಪಾಲಾಗಿ ವಿಂಗಡಿಸಿ ನನ್ನ ಬಳಿಗೆ ಬರಬೇಕು. ನಾನು ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ನಿಮಗೋಸ್ಕರ ಚೀಟು ಹಾಕುತ್ತೇನೆ.೭ [7]ಲೇವಿಯರಿಗೆ ನಿಮ್ಮ ಹಾಗೆ ಪಾಲು ಸಿಕ್ಕುವುದಿಲ್ಲ. ಸರ್ವೇಶ್ವರನಿಗೆ ಸಲ್ಲಿಸುವ ಯಾಜಕ ಸೇವೆಯೇ ಅವರ ಸೊತ್ತು. ಗಾದ್ ಹಾಗೂ ರೂಬೇನ್ ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಜೋರ್ಡನಿನ ಪೂರ್ವದಿಕ್ಕಿನಲ್ಲಿ ಸರ್ವೇಶ್ವರನ ದಾಸ ಮೋಶೆಯಿಂದಲೇ ಸೊತ್ತು ಸಿಕ್ಕಿದೆ,” ಎಂದನು.೮ [8]ನಾಡಿನ ಅಳತೆಯನ್ನು ಮಾಡತಕ್ಕ ಜನರು ಹೊರಡುವುದಕ್ಕೆ ಮುಂಚೆ ಯೆಹೋಶುವನು ಅವರಿಗೆ, “ಹೋಗಿ ನಾಡಿನಲ್ಲೆಲ್ಲಾ ಸಂಚರಿಸಿ ಅಳತೆಮಾಡಿ ನನ್ನ ಬಳಿ ಶೀಲೋವಿಗೆ ತನ್ನಿ. ನಾನು ಸರ್ವೇಶ್ವರನ ಮುಂದೆ ನಿಮಗೋಸ್ಕರ ಚೀಟು ಹಾಕುತ್ತೇನೆ,” ಎಂದು ಹೇಳಿ ಕಳುಹಿಸಿದನು.೯ [9]ಆ ಜನರು ಹೊರಟು ನಾಡಿನಲ್ಲೆಲ್ಲಾ ಸಂಚರಿಸಿ ಒಂದು ಪುಸ್ತಕದಲ್ಲಿ ಗ್ರಾಮ-ನಗರಗಳನ್ನೆಲ್ಲಾ ಬರೆದು ಏಳು ಭಾಗಗಳನ್ನಾಗಿ ಮಾಡಿ ಶೀಲೋವಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಹಿಂದಿರುಗಿ ಬಂದರು.೧೦ [10]ಯೆಹೋಶುವನು ಶೀಲೋವಿನಲ್ಲಿಯೇ ಸರ್ವೇಶ್ವರನ ಮುಂದೆ ಅವರಿಗೋಸ್ಕರ ಚೀಟು ಹಾಕಿ ನಾಡನ್ನು ಅವರವರ ಪಂಗಡಗಳಿಗೆ ಹಂಚಿಕೊಟ್ಟನು.೧೧ [11]ಚೀಟು ಮೊದಲು ಬೆನ್ಯಾಮೀನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಸೊತ್ತು ಯೆಹೂದಾ ಮತ್ತು ಜೋಸೆಫ್ ವಂಶಸ್ಥರ ಪ್ರಾಂತ್ಯಗಳಿಗೆ ಮಧ್ಯೆಯಿದೆ.೧೨ [12]ಅದರ ಉತ್ತರ ದಿಕ್ಕಿನ ಎಲ್ಲೆ ಜೋರ್ಡನ್ ನದಿಯಿಂದ ತೊಡಗಿ ಜೆರಿಕೋವಿನ ಉತ್ತರದಲ್ಲಿರುವ ಗುಡ್ಡದ ಮೇಲಿಂದ ಪಶ್ಚಿಮಕ್ಕೆ ಹೋಗಿ, ದಿಣ್ಣೆ ಹತ್ತಿ ಬೆತಾವೆನಿನ ಬಯಲಿನಲ್ಲಿ ಕೊನೆಗೊಳ್ಳುತ್ತದೆ.೧೩ [13]ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಎನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗಿ ಅಲ್ಲಿಂದ ಇಳಿದು ಅಟಾರೋತದ್ದಾರಿನ ಮೇಲೆ ಕೆಳಗಿನ ಬೇತ್ ಹೋರೋನಿನ ಬಳಿಯಲ್ಲಿರುವ ಬೆಟ್ಟಕ್ಕೆ ಹೋಗುತ್ತದೆ.೧೪ [14]ಈ ಎಲ್ಲೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು, ಕಿರ್ಯತ್ ಬಾಳ್ ಎನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯತ್ಯಾರೀಮ್ ಎಂಬ ನಗರದಲ್ಲಿ ಕೊನೆಗೊಳ್ಳುತ್ತದೆ. ಇದೇ ಅವರ ವಂಶಸ್ಥರ ಪಶ್ಚಿಮದ ಎಲ್ಲೆ.೧೫ [15]ದಕ್ಷಿಣ ದಿಕ್ಕಿನ ಎಲ್ಲೆ ಪಶ್ಚಿಮದ ಮೂಲೆಯಾಗಿರುವ ಕಿರ್ಯತ್ಯಾರೀಮಿನ ಪ್ರಾಂತ್ಯದಿಂದ ತೊಡಗಿ೧೬ [16]ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ಕಣಿವೆಯ ಉತ್ತರದಲ್ಲೂ ಇರುವ ಬೆಟ್ಟದ ಅಂಚಿಗೆ ಹೋಗಿ ಅಲ್ಲಿಂದ ಯೆಬೂಸಿಯರ ಬೆಟ್ಟದ ದಕ್ಷಿಣದಲ್ಲಿದ್ದ ಬೆನ್ ಹಿನ್ನೋಮ್ ಕಣಿವೆಯ ಮಾರ್ಗವಾಗಿ ಏನ್ ರೋಗೆಲಿಗೆ ಬರುತ್ತದೆ.೧೭ [17]ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು, ಇಳಿಯುತ್ತಾ ಏನ್ ಷೆಮೆಸ್, ಮೀಮಿನ ದಾರಿಯ ಎದುರಿನಲ್ಲಿರುವ ಗೆಲೀಲೊತ್,೧೮ [18]ರೂಬೇನನ ಮಗನಾದ ಬೋಹನನ ಬಂಡೆ, ಅರಾಬಾದ ಉತ್ತರದಲ್ಲಿರುವ ಬೆಟ್ಟ ಇವುಗಳ ಮೇಲೆ ಅರಾಬಾ ಎಂಬ ಕಣಿವೆ ಪ್ರದೇಶಕ್ಕೆ ಹೋಗುತ್ತದೆ.೧೯ [19]ಅಲ್ಲಿಂದ ಆ ಎಲ್ಲೆ ಬೇತ್ ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಉತ್ತರ ಮೂಲೆಗೆ ಹೋಗಿ ಜೋರ್ಡನ್ ನದಿಯು ಆ ಸಮುದ್ರಕ್ಕೆ ಕೂಡುವ ಸ್ಥಳದಲ್ಲಿ ಮುಗಿಯುತ್ತದೆ. ಇದೇ ದಕ್ಷಿಣದಿಕ್ಕಿನ ಸರಹದ್ದು.೨೦ [20]ಜೋರ್ಡನ್ ನದಿಯೇ ಅವರ ಪೂರ್ವದಿಕ್ಕಿನ ಸರಹದ್ದು, ಬೆನ್ಯಾಮೀನ್ ಗೋತ್ರಗಳ ಸೊತ್ತಿನ ಸುತ್ತಣ ಎಲ್ಲೆ ಇದೇ.೨೧ [21]ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ನಗರಗಳು ಯಾವುವೆಂದರೆ: ಜೆರಿಕೊ, ಬೇತ್ ಹೊಗ್ಲಾ, ಏಮೆಕ್ಕೆಚ್ಚೀಚ್, ಬೇತ್ ಅರಾಬಾ,೨೨ [22]ಚಮಾರಯಿಮ್, ಬೇತೇಲ್, ಅವ್ವೀಮ್, ಪಾರಾ,೨೩ [23]ಒಫ್ರಾ, ಅಮ್ಮೋನ್ಯ, ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು;೨೪ [24]ಗಿಬ್ಯೋನ್, ರಾಮಾ, ಬೇರೋತ್,೨೫ [25]ಮಿಚ್ಫೆ, ಕೆಫೀರಾ, ಮೋಚಾ, ರೆಕೆಮ್, ಇರ್ಪೇಲ್, ತರಲಾ, ಚೇಲ,೨೬ [26]ಎಲೆಫ್, ಯೆಬೂಸಿಯರು ಇದ್ದಂಥ ಜೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ನಗರಗಳೂ ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ಆಸ್ತಿಪಾಸ್ತಿ ಇವೇ.Kannada Bible (KNCL) 2016 Kannada C.L. Bible - ಸತ್ಯವೇದವು C.L. Copyright © 2016 by The Bible Society of India Used by permission. worldwide ಕನ್ನಡ ಬೈಬಲ್ (KNCL) 2016 ಯೊಹೋಶುವ ೧೮ 00:00:00 00:00:00 0.5x 2.0x https://beblia.bible:81/BibleAudio/kannadakncl/joshua/018.mp3 24 18